ಕಾಸರಗೋಡು: ವಿಕಲಚೇತನ ಬಾಲಕಿಯ ಕೈಕಾಳೂ ಬಿಗಿದು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಣಿಮುಂಡ ನಿವಾಸಿ, ಸುರೇಶ್ ಅಲಿಯಾಸ್ ಚರಿಯಾಂಬು(42)ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ಎ. ಮನೋಜ್ ತ್ರಿವಳಿ ಜೀವಾವಧಿ ಶಿಕ್ಷೆ ಹಾಗೂ ನಾಲ್ಕು ಲಕ್ಷ ರೂ. ದಂಡ ವಿಧಿಸಿದ್ದಾರೆ.
ಪೋಕ್ಸೋ ಪ್ರಕರಣವೊಂದರ ಆರೋಪಿಗೆ ಕೇರಳದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತ್ರಿವಳಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನೊಂದು ಸೆಕ್ಷನ್ ಪ್ರಕಾರ 10ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಎಂಟು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೂಗಿ ಹಾಗೂ ಕಿವುಡುತನ ಹೊಂದಿದ್ದ 16ರ ಹರೆಯದ ಬಾಲಕಿಯ ಕೈಕಾಲು ಬಿಗಿದು ಕಿರುಕುಳ ನೀಡಲಾಗಿತ್ತು. 2015 ಸೆ, 22ರಂದು ಘಟನೆ. ಮನೆಯವರು ಕೆಲಸಕ್ಕೆ ತೆರಳಿದ್ದ ಸಂದರ್ಭ ನೀರು ಕುಡಿಯುವ ನೆಪದಲ್ಲಿ ಆಗಮಿಸಿ, ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬಾಲಕಿಯ ಕೈಕಾಲು ಬಿಗಿದು ಕೃತ್ಯವೆಸಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ವಿಕಲಚೇತನ ಬಾಲಕಿಯ ಕಟ್ಟಿಹಾಕಿ ಲೈಂಗಿಕ ಕಿರುಕುಳ-ಆರೋಪಿಗೆ ತ್ರಿವಳಿ ಜೀವಾವಧಿ ಶಿಕ್ಷೆ
0
ಡಿಸೆಂಬರ್ 01, 2022
Tags





