ಕಾಸರಗೋಡು: ಮೀನುಗಾರಿಕಾ ಇಲಾಖೆ ವತಿಯಿಂದ ಸಾರ್ವಜನಿಕ ಜಲಮೂಲಗಳಲ್ಲಿ ಮೀನಿನ ಮರಿಗಳ ಅಳವಡಿಕೆ ಹಾಗೂ ಸಾರ್ವಜನಿಕರಿಗೆ ಮೀನಿನ ಮರಿಗಳನ್ನು ವಿತರಿಸುವ ಕಾರ್ಯ ನಡೆಯಿತು. ಕಾಞಂಗಾಡು ನಗರಸಭೆಯ 10ನೇ ವಾರ್ಡು ಅಲಾಮಿಪಳ್ಳಿ ಸಾರ್ವಜನಿಕ ಕೆರೆಯಲ್ಲಿ ಮೀನಿನ ಮರಿಗಳನ್ನು ನಿಕ್ಷೇಪಿಸಲಾಯಿತು. ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ ಅವರು ಹತ್ತನೇ ವಆರ್ಡು ಸದಸ್ಯೆ ಕೆ.ವಿ ಸುಶೀಲಾ ಅವರಿಗೆ ನೀಡುವ ಮೂಲಕಚಾಲನೆ ನೀಡಿದರು. ಈ ಸಂದರ್ಭ ಸಾರ್ವಜನಿಕರಿಗೆ ಮೀನಿನ ಮರಿಗಳ ವಿತರಣಾ ಕಾರ್ಯವನ್ನೂ ಉದ್ಘಾಟಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ವಿ.ವಿ. ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಲತಾ ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆ ಪ್ರಮೋಟರ್ ಜಿ.ಜಿ.ಜಾನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೌನ್ಸಿಲರ್ ಎನ್. ಇಂದಿರಾ ಸ್ವಾಗತಿಸಿದರು. ಹಸೀನಾ ರಜಾಕ್ ವಂದಿಸಿದರು.
ಸಾರ್ವಜನಿಕ ಕೆರೆಗಳಲ್ಲಿ ಮೀನಿನ ಮರಿಗಳ ಅಳವಡಿಕೆ ಮತ್ತು ವಿತರಣೆ
0
ಡಿಸೆಂಬರ್ 14, 2022
Tags





