ಕಾಸರಗೋಡು: ವಿಶ್ವಕಪ್ ಫುಟ್ಬಾಲ್ ಅಂಗವಾಗಿ ಕಾಞಂಗಾಡು ಬ್ಲಾಕ್ ಪಂಚಾಯಿತಿ ಮತ್ತು ಮಡಿಕೈ ಗ್ರಾಮ ಪಂಚಾಯಿತಿ ಮಧ್ಯೆ ಸೌಹಾರ್ದ ಫುಟ್ಬಾಲ್ ಪಂದ್ಯಾಟ ಆಯೋಜಿಸಲಾಯಿತು.
ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಅಜೆರ್ಂಟೀನಾ ತಂಡವನ್ನು ಪ್ರತಿನಿಧಿಸಿದರೆ, ಮಡಿಕೈ ಪಂಚಾಯಿತಿ ಬ್ರೆಜಿಲ್ ತಂಡವನ್ನು ತಮ್ಮ ಜೆರ್ಸಿಯಲ್ಲಿ ಪ್ರತಿನಿಧಿಸಿ ಮೈದಾನ ಪ್ರವೇಶಿಸಿತ್ತು.
ಕಾಞಂಗಾಡ್ ಟರ್ಫ್‍ನಲ್ಲಿ ನಡೆದ ಪಂದ್ಯಾಟವನ್ನು ಕಾಞಂಗಾಡ್ ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ಉದ್ಘಾಟಿಸಿದರು. ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಅವರು ಅಜೆರ್ಂಟೀನಾ ಜೆರ್ಸಿಯಲ್ಲಿ ತಂಡವನ್ನು ಹಾಗೂ ಮಡಿಕೈ ಪಂಚಾಯಿತಿ ಉಪಾಧ್ಯಕ್ಷ ಪಿ. ಪ್ರಕಾಶ್ ಬ್ರೆಜಿಲ್ ಜೆರ್ಸಿಯಲ್ಲಿ ತಂಡವನ್ನು ಮುನ್ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ನೌಕರರೂ ಭಾಗವಹಿಸಿದ್ದರು. ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಬ್ರೆಜಿಲ್ ಪ್ರತಿನಿಧಿಸುವ ಮಡಿಕೈ ಗ್ರಾಮ ಪಂಚಾಯಿತಿ ತಂಡ ಜಯಗಳಿಸಿತು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ವಿಜೇತರಿಗೆ ಟ್ರೋಫಿ ವಿತರಿಸಿದರು.
ವಿಶ್ವ ಫುಟ್‍ಬಾಲ್ ಚಾಂಪಿಯನ್‍ಶಿಪ್-ಕಾಞಂಗಾಡಿನಲ್ಲಿ ಸೌಹಾರ್ದ ಪಂದ್ಯಾಟ
0
ಡಿಸೆಂಬರ್ 01, 2022
Tags





