ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪತ್ತೆ ಕಾರ್ಯವನ್ನು ಡಿಸೆಂಬರ್ ತಿಂಗಳಲ್ಲೇ ಆರಂಭಿಸಿ, 2023 ಫೆಬ್ರವರಿ ವೇಳೆಗೆ ವೈದ್ಯಕೀಯ ಶೀಬಿರ ನಡೆಸಲು ನಿರ್ಧರಿಸಲಾಗಿದೆ. ಎಂಡೋಸಲ್ಫಾನ್ ಸೆಲ್ ಧ್ಯಕ್ಷರೂ ಆಗಿರುವ ಲೋಕೋಪಯೋಗಿ, ಪ್ರವಾಸೋದ್ಯಮ ಖಾತೆ ಸಚಿವ ಪಿ. ಎ. ಮಹಮ್ಮದ್ ರಿಯಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಚಿವರಾದ ವೀಣಾ ಜಾರ್ಜ್, ಡಾ. ಆರ್.ಬಿಂದು ಮತ್ತು ಅಹಮದ್ ದೇವರಕೋವಿಲ್ ಉಪಸ್ಥಿತರಿದ್ದರು.
ಅಧಿಕೃತ ಅಧಿಸೂಚನೆ ಹೊರಡಿಸಿ, ಸಂತ್ರಸ್ತರಿಂದ ಪಡೆದ ಹೇಳಿಕೆಗಳ ವಿವರವಾದ ಪರೀಕ್ಷೆಯ ನಂತರ ಫೆಬ್ರವರಿ 2023 ರೊಳಗೆ ವೈದ್ಯಕೀಯ ಶಿಬಿರ ಆಯೋಜಿಸಲು ಸಭೆ ಒಪ್ಪಿಗೆ ನೀಡಿತು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಹೆಚ್ಚುವರಿ ಬ್ಲಾಕ್‍ನ ಕಾಮಗಾರಿಯನ್ನು ಮಾರ್ಚ್ ವೇಳೆಗೆ ಪೂರ್ಣಗೊಳಿಸಿ ನರವಿಜ್ಞಾನ ತಜ್ಞರ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲು ಈ ಸಂದರ್ಭ ಒಪ್ಪಿಗೆ ನೀಡಲಾಯಿತು. ಪ್ರಯೋಗಾಲಯ ಶೀಘ್ರ ಕಾರ್ಯನಿರ್ವಹಿಸುವುದು, ಮುಳಿಯಾರ್ ಪುನರ್ವಸತಿ ಗ್ರಾಮ ಮೊದಲ ಹಂತಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದು, ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳಲ್ಲಿ ಎರಡು ತಿಂಗಳ ಕಾಲ ಮೂಲ ಸೌಕರ್ಯ ಕಲ್ಪಿಸಲೂ ತೀರ್ಮಾನಿಸಲಾಯಿತು. ಸಭೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸವಾಗತ್ ರಣವೀರ್‍ಚಂದ್, ಇಲಾಖಾ ಕಾರ್ಯದರ್ಶಿಗಳು ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಎಂಡೋಸಲ್ಫಾನ್ ಸಂತ್ರಸ್ತರ ಪತ್ತೆಗೆ ಫೆಬ್ರವರಿಯಲ್ಲಿ ವೈದ್ಯಕೀಯ ಶಿಬಿರ
0
ಡಿಸೆಂಬರ್ 01, 2022
Tags




