ಕಾಸರಗೋಡು: ಪರಿಸರ ಮಾಲಿನ್ಯ ತಡೆಗಟ್ಟುವುದು, ಇಂಧನ ಗಣನೀಯವಾಗಿ ಕಡಿತಗೊಳಿಸುವುದರ ಜತೆಗೆ ಇಂಧನ ಬೆಲೆಯೇರಿಕೆಯಿಂದ ಪಾರಾಗುವ ನಿಟ್ಟಿನಲ್ಲಿ ಕೇರಳ ಸರ್ಕಾರ ಜಾರಿಗೆ ತಂದಿರುವ ಇಲೆಕ್ಟ್ರಾನಿಕ್ ವೆಹಿಕಲ್ ಪಾಲಿಸಿಯನ್ವಯ ಕೆಎಸ್‍ಇಬಿ ನೇತೃತ್ವದಲ್ಲಿ ಕಾಞಂಗಾಡಿನ ಮಾವುಂಗಾಲ್‍ನಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಗೆ ಗುರುವಾರ ಚಾಲನೆ ನೀಡಲಾಯಿತು.
ಕೇರಳದಲ್ಲಿ ಸ್ಥಾಪಿಸಲಾಗಿರುವ 56 ರೀಚಾರ್ಜ್ ಕೇಂದ್ರಗಳಲ್ಲಿ ಕಾಸರಗೋಡಿನ ಮಾವುಂಗಾಲ್ ಒಳಗೊಂಡಿದೆ.
ಹೊಸದುರ್ಗ ಮಾವುಂಗಾಲ್‍ನಲ್ಲಿ ಸ್ಥಾಪಿಸಲಾಗಿರುವ ವೆಹಿಕಲ್ ಚಾರ್ಜಿಂಗ್ ಸ್ಟೇಶನನ್ನು ಆನ್‍ಲೈನ್ ಸಮಾರಂಭದ ಮೂಲಕ ರಾಜ್ಯ ಇಂಧನ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಉದ್ಘಾಟಿಸಿ ಮಾತನಾಡಿ, ಇಂಧನ ಬಳಕೆಯನ್ನು ಹಂತ ಹಂತವಾಗಿ ಕಡಿತಗೊಳಿಸುವ ಮೂಲಕ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟುವುದರ ಜತೆಗೆ ಏರಿಕೆಯಗುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಸೌರ ಇಂಧನ ವ್ಯಾಪಕ ಗೊಳಿಸುವುದೂ ಇಂದಿನ ಕಾಳಘಟ್ಟದ ಅನಿವಾರ್ಯವಾಗಿದ್ದು, ಕಾಸರಗೋಡು ಜಿಲ್ಲೆ ಸೌರವಿದ್ಯುತ್ ಉತ್ಪಾದನೆಗೆ ವಿಪುಲ ಅವಕಾಶ ಹೊಂದಿದೆ. ಕೃಷಿಕರು ಬಳಸುವ ಸೌರವಿದ್ಯುತ್ ಪಂಪ್‍ಸೆಟ್‍ಗಳಿಗೆ ಶೇ. 60ರ ರಿಯಾಯಿತಿ ಲಭ್ಯವಾಗಲಿದ್ದು, ಸೋಲಾರ್ ಪಂಪು ಅಳವಡಿಸಿ ಕೃಷಿನಡೆಸುವ ರೈತರಿಗೆ ಎಲ್ಲ ರೀತಿಯ ಸಹಾಯ ಒದಗಿಸಲು ಸರ್ಕಾರ ಬದ್ಧ ಎಂದು ತಿಳಿಸಿದರು.
ಮಾವುಂಗಾಲ್‍ನ 110ಕೆ.ವಿ ಸಬ್‍ಸ್ಟೇಶನ್ ವಠಾರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೆಎಸ್‍ಇಬಿ ಮುಖ್ಯ ಅಭಿಯಂತ ಕೆ. ಸಈತಾರಾಮನ್ ವರದಿ ಮಂಡಿಸಿದರು.ಅಜನೂರ್ ಗ್ರಾಪಂ ಅಧ್ಯಕ್ಷೆ ಕೆ.ಶೋಭಾ, ಕಞಂಗಾಡ್ ಬ್ಲಾಕ್ ಪಂಚಾಯಿತಿ ಸಥಾಯೀ ಸಮಿತಿ ಅಧ್ಯಕ್ಷ ಕೆ. ಅಬ್ದುಲ್ ರಹಮಾನ್, ಜನಪ್ರತಿನಿಧೀಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧೀಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಇಲೆಕ್ಟ್ರಾನಿಕ್ ವಾಹನಗಳ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಗೆ ಚಾಲನೆ
0
ಡಿಸೆಂಬರ್ 01, 2022
Tags





