ಕಾಸರಗೋಡು: ಸಂಘಟಕ ಯುವ ಮೋರ್ಚಾ ರಾಜ್ಯ ಮುಖಂಡ ದಿ.ಕೆ.ಟಿ.ಜಯಕೃಷ್ಣನ್ ಮಾಸ್ಟರ್ ಸಂಸ್ಮರಣ ಸಮಾರಂಭ ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿತು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಕೇರಳ ಇಂದು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಎಡರಂಗ ಸರ್ಕಾರ ಕಾರಣವಾಗಿದೆ ಎಂದು ತಿಳಿಸಿದರು.
ಯುವ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ವೇಲಾಯುಧನ್, ವಿಜಯಕುಮಾರ್ ರೈ, ರಾಜ್ಯ ಸಮಿತಿ ಸದಸ್ಯ ಸತೀಶ್‍ಚಂದ್ರ ಭಂಡಾರಿ, ಯುವ ಮೋರ್ಚಾ ರಾಜ್ಯ ಮಹಿಳಾ ಸಂಚಾಲಕಿ ಅಂಜು ಜೋಸ್ತಿ ಉಪಸ್ಥಿತರಿದ್ದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಕೆದಿಲಾಯ ಸ್ವಾಗತಿಸಿದರು. ಕೀರ್ತನ್ ಜೆ. ಕೂಡ್ಲು ವಂದಿಸಿದರು.
ಕಾಸರಗೋಡಿನಲ್ಲಿ ಕೆ.ಟಿ ಜಯಕೃಷ್ಣನ್ ಮಾಸ್ಟರ್ ಸಂಸ್ಮರಣಾ ಸಮಾರಂಭ
0
ಡಿಸೆಂಬರ್ 01, 2022
Tags





