HEALTH TIPS

ಎಣ್ಮಕಜೆ ಗ್ರಾ.ಪಂ.ಪೆರ್ಲ ಕುಟುಂಬ ಆರೋಗ್ಯ ಕೇಂದ್ರದಿಂದ ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆ


             ಪೆರ್ಲ: ಎಣ್ಮಕಜೆ ಗ್ರಾ.ಪಂ., ಪೆರ್ಲ ಕುಟುಂಬ ಆರೋಗ್ಯ ಕೇಂದ್ರ, ಜಿಲ್ಲಾ ಕ್ಷಯರೋಗ ನಿವಾರಣಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಗ್ರಾ.ಪಂ.ಸಭಾಂಗಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ಏಡ್ಸ್ ದಿನ ಆಚರಿಸಲಾಯಿತು.
          ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.ಗ್ರಾ.ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಭಿ ಹನೀಫ್, ಪ್ರಭಾರ ಕಾರ್ಯದರ್ಶಿ ಪ್ರೇಮ್ ಚಂದ್ ಮಾತನಾಡಿದರು.
        ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಹೆಲ್ತ್ ನರ್ಸ್ ಸಲ್ಮತ್ ಪ್ರತಿಜ್ಞೆ ಬೋಧಿಸಿದರು.ಒಗ್ಗಟ್ಟಿನ ಜಾಗತಿಕ ಸಂಕೇತವಾಗಿ ಪರಸ್ಪರ ಕೆಂಪು ರಿಬ್ಬನ್ ಅಳವಡಿಸಲಾಯಿತು.ಆಶಾ ಅಂಗನವಾಡಿ ಕಾರ್ಯಕರ್ತರಿಗೆ ತರಗತಿ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.
        ಜಿಲ್ಲಾ ಕ್ಷಯ ರೋಗ ನಿವಾರಣಾ ಕೇಂದ್ರದ ಸೀನಿಯರ್ ಎಸ್ ಟಿ ಎಸ್ ರತೀಶ್, ಜೂ.ಹೆಲ್ತ್ ಇನ್ಸ್ಪೆಕ್ಟರ್ ಹರೀಶ್ ಎಂ.ಎಸ್., ಆರ್ ಬಿ ಎಸ್ ಕೆ ನರ್ಸ್ ಸ್ವಾತಿ ತರಗತಿ ನೀಡಿದರು.ಕ್ಷಯ ರೋಗ ನಿವಾರಣಾ ಕೇಂದ್ರದ ಟಿಬಿಎಚ್ ವಿ ನಿತೀಶ್ ಲಾಲ್, ವಾರ್ಡ್ ಸದಸ್ಯರು ಉಪಸ್ಥಿತರಿದ್ದರು.ಆರೋಗ್ಯ ಅಧಿಕಾರಿ ಸಜಿತ್ ವಿ. ಸ್ವಾಗತಿಸಿ, ಕಿರಿಯ ಆರೋಗ್ಯ ಅಧಿಕಾರಿ ಬಿಜಿತ್ ಬಿ.ವಂದಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries