ಕೊಚ್ಚಿ: ರಾಜ್ಯ ಶಾಲಾ ಕಲೋತ್ಸವಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಶಾಲಾ ಕಲೋತ್ಸವವನ್ನು ಗಲಭೆ ಮತ್ತು ಅನಾರೋಗ್ಯಕರ ಸ್ಪರ್ಧೆಗಳಿಗೆ ವೇದಿಕೆ ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ.
ಪ್ರತಿಭೆಯ ಅನಾವರಣಕ್ಕೆ ಭಾಗವಹಿಸುವುದು ಗೆಲ್ಲುವುದಕ್ಕಿಂತ ಹೆಚ್ಚು. ಪಾಲಕರು ತಮ್ಮ ಮಕ್ಕಳ ವೈಫಲ್ಯವನ್ನು ಸ್ವೀಕರಿಸಲು ಸಿದ್ಧರಿರಬೇಕು. ಪೋಷಕರ ಅನಾವಶ್ಯಕ ಆತಂಕ ಮಕ್ಕಳನ್ನು ಖಿನ್ನತೆಗೆ ದೂಡಬಹುದು. ಕಲೋತ್ಸವಗಳು ದುಂದುವೆಚ್ಚ, ಅನಾರೋಗ್ಯಕರ ಸ್ಪರ್ಧೆಗಳಿಗೆ ವೇದಿಕೆಯಾಗಬಾರದು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಬಡ ಹಿನ್ನೆಲೆಯಿಂದ ಬರುವ ಅನೇಕ ಪ್ರತಿಭಾವಂತ ಮಕ್ಕಳು ಭಾರೀ ವೆಚ್ಚವನ್ನು ಭರಿಸಲು ಅಸಮರ್ಥರಾಗಿದ್ದಾರೆ ಎಂದು ಹೈಕೋರ್ಟ್ ಬೊಟ್ಟುಮಾಡಿದೆ. ಮೇಲ್ಮನವಿಗಳೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸುವ ಮಕ್ಕಳ ಪೋಷಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಕಂದಾಯ ಜಿಲ್ಲಾ ಕಲೋತ್ಸವ ತೀರ್ಪಿನ ವಿರುದ್ಧದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದೇ ವೇಳೆ ಆತಿಥೇಯ ನಗರಿ ಕೋಝಿಕ್ಕೋಡ್ ನಲ್ಲಿ ರಾಜ್ಯಮಟ್ಟದ ಶಾಲಾ ಕಲೋತ್ಸವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಏμÁ್ಯದಲ್ಲಿಯೇ ಅತಿ ದೊಡ್ಡ ಕಲೋತ್ಸವ ಎಂಬ ಹೆಗ್ಗಳಿಕೆಯ ರಾಜ್ಯ ಶಾಲಾ ಕಲೋತ್ಸವ ಜನವರಿ 3ರಂದು ಬೆಳಗ್ಗೆ 8.30ಕ್ಕೆ ಮುಖ್ಯ ವೇದಿಕೆಯಲ್ಲಿ ನಡೆಯಲಿದೆ.
ವೆಸ್ಟ್‍ಹಿಲ್ ಕ್ಯಾಪ್ಟನ್ ವಿಕ್ರಂ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ನಿರ್ದೇಶಕ ಕೆ.ಜೀವನ್ ಬಾಬು ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಸಚಿವ ವಿ.ಶಿವಂಕುಟ್ಟಿ ಅಧ್ಯಕ್ಷತೆ ವಹಿಸುವರು. 7ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಪಕ್ಷ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸುವರು. ಸಚಿವ ವಿ.ಶಿವಂÀಕುಟ್ಟಿ ಬಹುಮಾನ ವಿತರಿಸುವರು. ಸಚಿವ ಪಿ.ಎ. ಮುಹಮ್ಮದ್ ರಿಯಾಝ್ ಅಧ್ಯಕ್ಷತೆ ವಹಿಸುವರು. ಸಚಿವ ಕೆ.ರಾಜನ್ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ.
ಕಲೋತ್ಸವದಲ್ಲಿ ಬಹುಮಾನ ಗಳಿಸುವುದು ಅನಾರೋಗ್ಯಕರ ಸ್ಪರ್ಧೆಯಾಗಬಾರದು: ಪೋಷಕರ ಕಡೆಯಿಂದ ಅನಗತ್ಯ ಆತಂಕ ಮಕ್ಕಳನ್ನು ಖಿನ್ನತೆಗೆ ತಳ್ಳಬಹುದು; ನಿರ್ದೇಶನ ನೀಡಿದ ಹೈಕೋರ್ಟ್
0
ಡಿಸೆಂಬರ್ 29, 2022





