ಕಾಸರಗೋಡು: ಧರ್ಮ ರಕ್ಷಣೆಗಾಗಿ ಮಕ್ಕಳಲ್ಲಿ ಸಂಸ್ಕøತಿ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಬೇಕು. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು. ಯುವ ಪೀಳಿಗೆ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತವಾಗಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಚೈತ್ರ ಕುಂದಾಪುರ ಹೇಳಿದರು.
ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಥಾಪಿತ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 90 ನೇ ವಾರ್ಷಿಕ ಸಂಭ್ರಮದಂಗವಾಗಿ ಲಲಿತ ಕಲಾಸದನದಲ್ಲಿ ಆಯೋಜಿಸಿದ ಮಹಿಳಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ಧರ್ಮ ಉಳಿದರೆ ಸಮಾಜ, ಸಂಸ್ಕøತಿ ಉಳಿಯುತ್ತದೆ. ಹಿಂದು ಧರ್ಮ ಯಾವತ್ತು ಹೆಣ್ಣು ಮಕ್ಕಳನ್ನು ಹೊರಗಿಟ್ಟಿಲ್ಲ. ಅಮ್ಮನವರ ದೇವಸ್ಥಾನವಿಲ್ಲದ ಗ್ರಾಮಗಳೇ ಇಲ್ಲ. ರಾಮರಾಜ ಕ್ಷತ್ರಿಯರು ನಂಬಿಗಸ್ಥರು. ದೇಶ ರಕ್ಷಣೆ ಮಾಡುವ ದೈಹಿಕ ಬಲವುಳ್ಳವರು. ಇದರಿಂದಲೇ ಪೆÇಲೀಸ್ ಇಲಾಖೆ, ಸೇನೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾಜದ ವ್ಯಕ್ತಿಗಳು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಮನೋರಮ ಚಾಪಾಡಿ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಕಿರಣ್ ಅಣಂಗೂರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು, ಮಂಗಳೂರು ರಾಮಕ್ಷತ್ರಿಯ ಮಹಿಳಾ ವೃಂದ ಅಧ್ಯಕ್ಷೆ ಶುಭಾ ಪ್ರಶಾಂತ್ ನುಳ್ಳಿಪ್ಪಾಡಿ, ಕರ್ನಾಟಕ ರಾಜ್ಯ ಪ್ರಾ.ಶಿಕ್ಷಣ ಪ್ರಕೋಷ್ಠ ಸದಸ್ಯೆ ಮಂಜುಳ ಅನಿಲ್ ರಾವ್, ಕಾಸರಗೋಡು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ ಇದರ ಕಾರ್ಯದರ್ಶಿ ಲತಾ ಪಿ, ರಾಷ್ಟ್ರಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ ರಾಜೇಶ್ವರಿ, ಗಡಿನಾಡ ಮಹಿಳಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತೆ ಸಂಧ್ಯಾರಾಣಿ ಟೀಚರ್, ಕಾಸರಗೋಡು ನಗರಸಭಾ ಸದಸ್ಯೆ ರಂಜಿತಾ ಡಿ. ಉಪಸ್ಥಿತರಿದ್ದು ಶುಭಹಾರೈಸಿದರು.
ಜಿಲ್ಲಾ ಮಹಿಳಾ ಸಂಘದ ಗೌರವ ಅಧ್ಯಕ್ಷೆ ಆಶಾ ರಾಧಾಕೃಷ್ಣ ಅಣಂಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಕನ್ಯಾ ಹರೀಶ್ ಅಣಂಗೂರು ಸ್ವಾಗತಿಸಿ, ಬಬಿತಾ ಸಂತೋಷ್, ಸಿ.ಎಚ್.ಉಷಾ ಕಾರ್ಯಕ್ರಮ ನಿರ್ವಹಿಸಿದರು. ಲಲಿತ ಕೇಶವ ವಂದಿಸಿದರು.
ಮಕ್ಕಳಲ್ಲಿ ಸಂಸ್ಕøತಿ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕು : ಚೈತ್ರ ಕುಂದಾಪುರ
0
ಡಿಸೆಂಬರ್ 29, 2022




