ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಫೆಸ್ಟ್‍ನಲ್ಲಿ ಉತ್ಪನ್ನಗಳ ಮಾರಾಟದಲ್ಲಿ ಕುಟುಂಬಶ್ರೀ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಫೆಸ್ಟ್ ಆರಂಭಗೊಂಡು ನಾಲ್ಕು ದಿವಸ ಕಳೆದಿದ್ದು, ಈ ದಿನಗಳಲ್ಲಿ 823590 ರೂ. ಆದಾಯ ಲಭಿಸಿದೆ. ಒಟ್ಟು 12 ಬೂತ್‍ಗಳಲ್ಲಿ ಕುಟುಂಬಶ್ರೀ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಮೊದಲ ದಿನ ಕುಟುಂಬಶ್ರೀ ಕೆಫೆಯಿಂದ 27,320 ರೂ., ಸಂಘಟನಾ ಸಮಿತಿಯ ರೆಸ್ಟೋರೆಂಟ್‍ನಿಂದ 82,400 ರೂ.ಉತ್ಪನ್ನಗಳನ್ನು ಮಾರಾಟ ಮಾಡುವ ಸ್ಟಾಲ್‍ನಿಂದ 2120 ರೂ. ಸಂಗ್ರಹಿಸಿದೆ. 25ರಂದು ಕುಟುಂಬಶ್ರೀ ಕೆಫೆಯಿಂದ 83240 ರೂ., ಸಂಘಟನಾ ಸಮಿತಿ ಕ್ಯಾಂಟೀನ್‍ನಿಂದ 80450 ರೂ., ಉತ್ಪನ್ನ ಮಳಿಗೆಯಿಂದ 5180 ರೂ.ಗಳ ವಹಿವಾಟು ನಡೆದಿದೆ. ಮೂರನೇ ದಿನವಾದ 26ನೇ ದಿನ ಅತಿ ಹೆಚ್ಚು 2.89 ಲಕ್ಷರೂ. ಮೊತ್ತದ ಉತ್ಪನ್ನ ಕುಟುಂಬಶ್ರೀ ಮಾರಾಟ ಮಾಡಿದೆ. ಡಿ. 27ರಂದು 2.53 ಲಕ್ಷ ರೂ.ಮೊತ್ತದ ಉತ್ಪನ್ನ ಮಾರಾಟವಾಗಿದೆ.
ಬೇಕಲ್ ಫೆಸ್ಟ್-ಕುಟುಂಬಶ್ರೀಉತ್ಪನ್ನಗಳಿಗೆ ಭಾರಿ ಬೇಡಿಕೆ: ನಾಲ್ಕು ದಿನದಲ್ಲಿ 82.25ಲಕ್ಷ .ರೂ. ಗಳಿಕೆ
0
ಡಿಸೆಂಬರ್ 29, 2022




