ಕಾಸರಗೋಡು: ಹದಿನೈದರ ಹರೆಯದ ಬಾಲಕಿಗೆ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಬದಿಯಡ್ಕ ಪೊಲೀಸ್ ಠಾಣೆ ವಯಾಪ್ತಿಯ ಚುಳ್ಳಿಕ್ಕಾಣ ನಿವಾಸಿ ಸಿ.ಎಚ್ ಬಶೀರ್ ಅಲಿಯಾಸ್ ಅಬ್ದುಲ್ ಬಶೀರ್(42)ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ಎ. ಮನೋಜ್ ಅವರು 15ವರ್ಷಗಳ ಕಠಿಣ ಜೈಲು ಶೀಕ್ಷೆ ಮತ್ತು ಒಂದುವರೆ ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಕಾಲ ಹೆಚ್ಚಿನ ಜೈಲುಶಿಕ್ಷೆ ಅನುಭವಿಸಬೇಕಾಗಿದೆ.
2017 ಜ. 6ರಂದು ಆರೋಪಿ ಅಬ್ದುಲ್ ಬಶೀರ್ ಬಾಲಕಿಯನ್ನು ಚುಲ್ಳಿಕ್ಕಾನದ ಕಾಡಿನಲ್ಲಿ, ಮಾವಿನಕಟ್ಟೆಯಲ್ಲಿ ಹಾಗೂ ಫೆ. 1ರಂದು ಮಣಿಯಂಪಾರೆಯ ಮನೆಯೊಂದಕ್ಕೆ ಕರೆದೊಯ್ದು, ಅಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಮಡಿದ್ದರು. ಅಂದಿನ ಇನ್ಸ್‍ಪೆಕ್ಟರ್ ಬಾಬು ಪೆರಿಙÉೂೀತ್ ಪ್ರಕರಣದ ತನಿಖೆ ನಡೆಸಿದ್ದು, ನಂತರ ಎಸ್.ಐ ಪ್ರಶಾಂತ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರವಾಗಿ ವಿಶೇಷ ಪ್ರೋಸಿಕ್ಯೂಟರ್ ಪ್ರಕಾಶ್ ಅಮ್ಮಣ್ಣಾಯ ವಾದಿಸಿದ್ದರು.
ಬಾಲಕಿಗೆ ಲೈಂಗಿಕ ಕಿರುಕುಳ-ಆರೋಪಿಗೆ 15ವರ್ಷಗಳ ಕಠಿಣ ಜೈಲು ಶಿಕ್ಷೆ, ದಂಡ
0
ಡಿಸೆಂಬರ್ 29, 2022




