ಬದಿಯಡ್ಕ: ಡಿ.25ರಿಂದ ಆರಂಭಗೊಳ್ಳುವ ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತರ ಕ್ಷೇತ್ರದ ಬ್ರಹ್ಮ ಕಲೋತ್ಸವ ಪ್ರಚಾರರ್ಥ ಕಾರ್ಯಾಲಯವನ್ನು ಗುರುವಾರ ಗ್ರಾಮ ವಿಕಾಸ ಕಟ್ಟಡದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ಜಯರಾಜ್ ಕುಣಿಕುಳ್ಳಾಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರುಷೋತ್ತಮ ಮಾಸ್ತರ್, ಚಂದ್ರಶೇಖರ್ ಕುರುಪ್ ಮಾಸ್ತರ್ ಉಬ್ರಂಗಳ , ಉದಯ್ ಕುಮಾರ್ ಕಲ್ಲಕಟ್ಟ, ರವಿ ಕುರುಪ್, ಚಂದ್ರ ಮಾಸ್ತರ್ ಪಿಲಾಂಕಟ್ಟೆ, ವೇಣುಗೋಪಾಲ್ ಚೂರಿಕ್ಕೋಡ್, ಉದಯ ಕುಮಾರ್, ಭಾಸ್ಕರ ಕುರುಪ್, ಅಜಿತ್ ಕುಮಾರ್, ಶಶಿಧರ ಮಣಿಯಾಣಿ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರಚಾರ ಸಮಿತಿ ಪ್ರದಾನ ಸಂಚಾಲಕ ರಾಜೇಶ್ ಮಾಸ್ತರ್ ಆಗಲ್ಪಾಡಿ ಸ್ವಾಗತಿಸಿ, ಅಧ್ಯಕ್ಷ ಗಂಗಾಧರ್ ತೆಕ್ಕೆಮೂಲೆ ವಂದಿಸಿದರು.
ಉಬ್ರಂಗಳ ಕ್ಷೇತ್ರ ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಉದ್ಘಾಟನೆ
0
ಡಿಸೆಂಬರ್ 02, 2022




.jpg)
