HEALTH TIPS

ಇಸ್ರೊದಿಂದ ಈ ವರ್ಷ ಹಲವು ವೈಜ್ಞಾನಿಕ ಆವಿಷ್ಕಾರ

 

               ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಈ ವರ್ಷ ಹಲವು ವೈಜ್ಞಾನಿಕ ಆವಿಷ್ಕಾರಗಳನ್ನು ಕೈಗೊಳ್ಳುವತ್ತ ಗಮನ ಹರಿಸಲಿದೆ.

                ಗಗನಯಾನ ಯೋಜನೆ ಸಂಬಂಧ ಹಲವು ಕಾರ್ಯಾಚರಣೆಗಳನ್ನು ಪರೀಕ್ಷಾರ್ಥವಾಗಿ ನಡೆಸಲು ಇಸ್ರೊ ನಿರ್ಧರಿಸಿದ್ದು, ಇದಕ್ಕೆ 2023 ಸಾಕ್ಷಿಯಾಗಲಿದೆ.ಸೂರ್ಯನಲ್ಲಿಗೆ ಒಂದು ಉಪಗ್ರಹ ಹಾಗೂ ಚಂದ್ರನಲ್ಲಿಗೆ ನೌಕೆ ರವಾನಿಸುವ ಯೋಜನೆಯನ್ನೂ ಇಸ್ರೊ ಹೊಂದಿದೆ.

                ಕರ್ನಾಟಕದ ಚಿತ್ರದುರ್ಗದಲ್ಲಿರುವ ಬಾಹ್ಯಾಕಾಶ ಪರೀಕ್ಷಾ ವಲಯದಿಂದ ಈ ವರ್ಷದ ಆರಂಭದಲ್ಲಿ ಮರುಬಳಕೆ ಮಾಡಬಹುದಾದಂತಹ ಉಡ್ಡಯನ ವಾಹನದ ಮೊದಲ ರನ್‌ವೇ ಲ್ಯಾಂಡಿಂಗ್‌ ಪರೀಕ್ಷೆ (ಆರ್‌ಎಲ್‌ವಿ-ಎಲ್‌ಇಎಕ್ಸ್‌) ನಡೆಸುವುದಾಗಿ ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಡಿಸೆಂಬರ್‌ನಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.

                     ಭಾರತದ ಹಲವು ನವೋದ್ಯಮಗಳೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ನಡೆಸುವ ಗುರಿ ಹೊಂದಿವೆ.

              'ನಾವು ಒಟ್ಟು ಆರು ಹೈಪರ್‌ಸ್ಪೆಕ್ಟ್ರಲ್‌ ಇಮೇಜರಿ ಉಪಗ್ರಹಗಳನ್ನು ಅಭಿವೃದ್ಧಿಪ‍ಡಿಸುತ್ತಿದ್ದು ಇವು 2023ರಲ್ಲಿ ಉಡಾವಣೆಗೆ ಸಿದ್ಧಗೊಳ್ಳಲಿವೆ' ಎಂದು ಪಿಕ್ಸೆಲ್‌ ಕಂಪನಿಯ ಸಹ ಸ್ಥಾಪಕ ಮತ್ತು ಸಿಇಒ ಅವೈಸ್‌ ಅಹ್ಮದ್‌ ಹೇಳಿದ್ದಾರೆ.

               ಖಾಸಗಿಯಾಗಿ ರಾಕೆಟ್‌ (ವಿಕ್ರಂ-ಎಸ್‌) ಅಭಿವೃದ್ಧಿಪಡಿಸಿ ಉಡಾವಣೆ ಮಾಡಿರುವ ದೇಶದ ಮೊದಲ ಬಾಹ್ಯಾಕಾಶ ನವೋದ್ಯಮ ಸಂಸ್ಥೆ 'ಸ್ಕೈರೂಟ್‌ ಏರೋಸ್ಪೇಸ್‌', ಈ ವರ್ಷ ಉಪಗ್ರಹವೊಂದನ್ನು ಉಡಾವಣೆ ಮಾಡುವ ಯೋಜನೆ ಹೊಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries