ಪತ್ತನಂತಿಟ್ಟ: ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಂಡಲ ಪೂಜಾ ಅವಧಿಯಲ್ಲಿ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ ಹತ್ತು ಲಕ್ಷ ದಾಟಿದೆ ಎಂದು ವರದಿಯಾಗಿದೆ.
ಪ್ರತಿ ದಿನ ಅರ್ಧ ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ.
ಅಂಕಿಅಂಶಗಳ ಪ್ರಕಾರ, ಮಂಡಲಕಾಲ ಯಾತ್ರೆಯ ಆರಂಭದ ದಿನದಿಂದ ನವೆಂಬರ್ 30 ರವರೆಗೆ 8.74 ಲಕ್ಷ ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಹೊರ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
ಬುಕ್ಕಿಂಗ್ ಮೂಲಕ ಬರುವವರಿಗೆ ಸನ್ನಿಧಿಗೆ ಪ್ರವೇಶ ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿ 13 ಕೇಂದ್ರಗಳಲ್ಲಿ ಆನ್‍ಲೈನ್ ವ್ಯವಸ್ಥೆಯೊಂದಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಮಕ್ಕಳ ಸಂಖ್ಯೆಯಲ್ಲಿಯೂ ಭಾರಿ ಹೆಚ್ಚಳವಾಗಿದೆ.
ಅಯ್ಯಪ್ಪ ಸನ್ನಿಧಿಗೆ ಭಕ್ತರ ದಂಡು: ಹೊರ ರಾಜ್ಯದ ಭಕ್ತರ ಸಂಖ್ಯೆಯಲ್ಲಿ ಏರಿಕೆ
0
ಡಿಸೆಂಬರ್ 03, 2022





