ಕಾಸರಗೋಡು: ಜಿಲ್ಲಾ ಕೇರಳೋತ್ಸವ 2022 ರ ಪೋಸ್ಟರ್ ಅನ್ನು ಜಿಲ್ಲಾ ಪೋಲೀಸ್ ಮುಖ್ಯಸ್ಥ ಡಾ. ವೈಭವ್ ಸಕ್ಸೇನಾ ಅವರು ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಡ್ವ.ಎಸ್.ಎನ್.ಸರಿತಾ, ಜಿಲ್ಲಾ ಕೇರಳ ಉತ್ಸವ ಕ್ರೀಡಾ ಮೇಳ ಸಂಘಟನಾ ಸಮಿತಿ ಸದಸ್ಯರಾದ ಫೈಸಲ್ ಪಟ್ಟುವಾಟಿಲ್, ತೌಸೀಫ್ ಅಹಮದ್, ಎಸ್.ರಫೀಕ್ ಮತ್ತಿತರರು ಭಾಗವಹಿಸಿದ್ದರು.
ಯುವಜನರ ಕಲೆ, ಸಾಂಸ್ಕøತಿಕ ಮತ್ತು ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ಅಂಗವಾಗಿ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಸಹಯೋಗದಲ್ಲಿ ರಾಜ್ಯ ಯುವ ಕಲ್ಯಾಣ ಮಂಡಳಿಯ ನೇತೃತ್ವದಲ್ಲಿ ಕೇರಳ ಉತ್ಸವವನ್ನು ಆಯೋಜಿಸಲಾಗಿದೆ. ಡಿಸೆಂಬರ್ 9 ರಿಂದ 15 ರವರೆಗೆ ಜಿಲ್ಲೆಯಲ್ಲಿ ಈ ಹಿಂದೆ ನಿರ್ಧರಿಸಿದ ವಿವಿಧ ಕ್ಷೇತ್ರಗಳಲ್ಲಿ ಕಲೆ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಜಿಲ್ಲಾ ಸ್ಪರ್ಧೆಗಳಲ್ಲಿ ಬ್ಲಾಕ್ ನಗರಸಭೆ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ 15 ರಿಂದ 40 ವರ್ಷದೊಳಗಿನವರು ಭಾಗವಹಿಸುತ್ತಾರೆ. ಸುಮಾರು 4,000 ಪ್ರತಿಭಾವಂತರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ಜಿಲ್ಲಾ ಕೇರಳೋತ್ಸವ: ಪೋಸ್ಟರ್ ಬಿಡುಗಡೆ
0
ಡಿಸೆಂಬರ್ 10, 2022





