ಕುಂಬಳೆ: ಕುಂಬಳೆ ಸದ್ಗುರು ಶ್ರೀ ನಿತ್ಯಾನಂದ ಮಠದಲ್ಲಿ ಜರುಗಿದ ಏಕಾಹ ಭಜನೆಯ ಅಮೃತಮಹೋತ್ಸವ ಸಮಾರೋಪ ಸಮಾರಂಭ ಅಂಗವಾಗಿ ಯಕ್ಷಗಾನ ತಾಳಮದ್ದಲೆ ಜರುಗಿತು.
ಎಡನಾಡು ಸ್ವಸ್ತಿ ಶ್ರೀ ಕಲಾಪ್ರತಿμÁ್ಠನ ವತಿಯಿಂದ "ವಿಷ್ಣು ವಿನೋದ" ಎಂಬ ಪ್ರಸಂಗದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದೊಡ್ಡಮಾಣಿ ವಸಂತ ಭಟ್, ಚೆಂಡೆ ಮದ್ದಲೆಗಳಲ್ಲಿ ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಮತ್ತು ಲಕ್ಷ್ಮೀಶ ಬೇಂದ್ರೋಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಶೇಣಿ ವೇಣುಗೋಪಾಲ ಭಟ್, ದಿವಾಣ ಶಿವಶಂಕರ ಭಟ್, ಗುತ್ತಿಗಾರು ಶಿವಶಂಕರ ಭಟ್ ಭಾಗವಹಿಸಿದರು.
ಕುಂಬಳೆಯಲ್ಲಿ ಯಕ್ಷಗಾನ ತಾಳಮದ್ದಳೆ
0
ಡಿಸೆಂಬರ್ 13, 2022




.jpg)
