ಉಪ್ಪಳ: ಮಾಲಿನ್ಯ ಸಮಸ್ಯೆ ತೀವ್ರವಾಗಿರುವ ಮಂಗಲ್ಪಾಡಿಯಲ್ಲಿ ಮಾಲಿನ್ಯಗಳ ರಾಶಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಎಸೆದ ಕಸವನ್ನು ಐದು ಕಡೆ ಸಂಗ್ರಹಿಸಲಾಯಿತು. ಪ್ರಸ್ತುತ ನಯಾಬಜಾರ್, ಕೈಕಂಬ, ಹನಫಿ ಬಜಾರ್, ಬಂದ್ಯೋಡು ಮತ್ತು ಉಪ್ಪಳ ಪೇಟೆಯಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಅದರ ವಿಲೇವಾರಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅಧಿಕಾರಿಗಳ ನಿಯೋಗವು ಪ್ರದೇಶಗಳಿಗೆ ಭೇಟಿ ನೀಡಿ ಕಸದ ಪ್ರಮಾಣವನ್ನು ಅಂದಾಜು ಮಾಡಿದೆ. ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಕಸ ಸುರಿಯುತ್ತಿರುವುದು ತಂಡದ ಗಮನಕ್ಕೆ ಬಂದಿದೆ. ಮುಂದಿನ ಹಂತವಾಗಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆಗೆಯಲು ಪಂಚಾಯಿತಿ ಮುಂದಾಗಬೇಕು. ಇದಕ್ಕಾಗಿ ಸ್ವಚ್ಛ ಕೇರಳ ಕಂಪನಿ ಸಹಯೋಗದಲ್ಲಿ ತ್ಯಾಜ್ಯವನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು. ಮಂಗಲ್ಪಾಡಿ ಪಂಚಾಯಿತಿಯಲ್ಲಿ ಉಂಟಾಗಿರುವ ಕಸದ ಸಮಸ್ಯೆ ಪರಿಹರಿಸಲು ಪಂಚಾಯಿತಿಯು ತುರ್ತಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಎಂದು ಈ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಸವನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ.
ಮಂಗಲ್ಪಾಡಿಯಲ್ಲಿ ಮಾಲಿನ್ಯ ವಿಲೇವಾರಿಗೆ ಕ್ರಮ
0
ಡಿಸೆಂಬರ್ 08, 2022




