ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಪಶುಆಹಾರ ವಿತರಣೆಯ ಉದ್ಘಾಟನೆ ಬದಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದದಲ್ಲಿ ಬುಧವಾರ ಜರಗಿತು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಫಲಾನುಭÀವಿಗಳಿಗೆ ಪಶು ಆಹಾರ ವಿತರಿಸಿ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್, ಬದಿಯಡ್ಕ ಸರ್ಕಾರಿ ಪಶುಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಇ.ಚಂದ್ರಬಾಬು, ಫಲಾನುಭವಿ ಹಾಲು ಉತ್ಪಾದಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಒಟ್ಟು 250 ಮಂದಿ ಫಲಾನುಭವಿಗಳಿಗೆ 2023 ಮಾರ್ಚ್ ತನಕ 4 ಚೀಲಗಳಷ್ಟು ಪಶು ಆಹಾರ ಲಭಿಸಲಿದೆ.
ಬದಿಯಡ್ಕದಲ್ಲಿ ಪಶು ಆಹಾರ ವಿತರಣೆಗೆ ಚಾಲನೆ
0
ಡಿಸೆಂಬರ್ 08, 2022




.jpg)
