ಮುಳ್ಳೇರಿಯ: ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಲಕ್ಷ್ಯವಿರಿಸಿ ಮುಳಿಯಾರ್ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿ.ಡಿ.ಎಸ್.ಘಟಕವು ಜಿಲ್ಲಾ ಮಿಷನ್‍ನ ತಾಂತ್ರಿಕ ನೆರವಿನೊಂದಿಗೆ ಜಾರಿಗೊಳಿಸುತ್ತಿರುವ ‘ಒಂದು ಮನೆ, ಒಂದು ಕೃಷಿಯಂತ್ರ’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕುಟುಂಬಶ್ರೀಯು ಸ್ಮಾಮ್(ಎಸ್.ಎಂ.ಎ.ಎಂ) ಯೋಜನೆಯಡಿಯಲ್ಲಿ ಸಂಯೋಜಿಸಿ ಕುಟುಂಬಶ್ರೀ ಜೆ.ಎಲ್.ಜಿ ಗುಂಪುಗಳಿಗೆ ಕೃಷಿ ಯಂತ್ರೋಪಕರಣ ವಿತರಿಸಲಾಗುತ್ತದೆ. ಯೋಜನೆಯ ಮೊದಲ ಹಂತದಲ್ಲಿ ಕುಟುಂಬಶ್ರೀ ರೈತರು 7.12 ಲಕ್ಷ ರೂ. ಗಳ ಕೃಷಿ ಯಂತ್ರೋಪಕರಣಗಳನ್ನು ರೂ. 3.47 ಲಕ್ಷ ಸಬ್ಸಿಡಿಯೊಂದಿಗೆ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಹೆಚ್ಚಿನ ಯಂತ್ರೋಪಕರಣಗಳನ್ನು ಒದಗಿಸಿ, ಕೃಷಿ ವಲಯದಲ್ಲಿ ತ್ವರಿತ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕುಟುಂಬಶ್ರೀ ಸಿ.ಡಿ.ಎಸ್. ನಲ್ಲಿರುವ ರೈತರ ಅನುಕೂಲ ಕೇಂದ್ರಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಯೋಜನೆಯನ್ನು ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸುವ ಗುರಿಯನ್ನು ಜಿಲ್ಲಾ ಮಿಷನ್ ಹೊಂದಿದೆ. ಜಿಲ್ಲೆಯ ಸಿಡಿಎಸ್‍ಗಳು, ರಿಬಿಲ್ಡ್ ಕೇರಳ, ಬಿಎನ್‍ಇಡಿಸಿ, ಜೆಎಲ್‍ಜಿ ಸದಸ್ಯರು, ಕುಟುಂಬಶ್ರೀ ಫಾರ್ಮರ್ ಪೆÇ್ರಡ್ಯೂಸರ್ಸ್ ಕಂಪನಿ ಕೂಡ ಈ ಯೋಜನೆಯ ಫಲಾನುಭವಿಗಳು. ಒಂದು ವರ್ಷದಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ತಲುಪಿಸುವ ಗುರಿಯನ್ನು ಕುಟುಂಬಶ್ರೀ ಹೊಂದಿದೆ.
ಮುಳಿಯಾರ್ ಗ್ರಾ.ಪಂ.ನ ಪೂಜಂಗೋಡು ಕೃಷಿ ಸಮಿತಿ(ಪಾಡಶೇಖರ) ಮೊದಲ ಹಂತದ ಟ್ರ್ಯಾಕ್ಟರ್ ಮತ್ತು ರೋಟೇಟರ್ ವಿತರಣೆಯ ಉದ್ಘಾಟನೆ ನಡೆಯಿತು. ಮುಳಿಯಾರು ಪಂಚಾಯತಿ ಅಧ್ಯಕ್ಷೆ ಪಿ.ವಿ.ಮಿನಿ ಕೃಷಿ ಯಂತ್ರೋಪಕರಣಗಳ ವಿತರಣೆಯನ್ನು ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಾಯಕ ಸಂಯೋಜಕ ಸಿ.ಎಚ್.ಇಕ್ಬಾಲ್ ಮುಖ್ಯ ಅತಿಥಿಯಾಗಿದ್ದರು. ಮುಳಿಯಾರು ಪಂಚಾಯತಿ ಉಪಾಧ್ಯಕ್ಷ ಎ.ಜನಾರ್ದನನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿಸಾ ಮನ್ಸೂರ್, ಸದಸ್ಯೆ ಎಂ.ಅನನ್ಯ ಮಾತನಾಡಿದರು. ಸಿಡಿಎಸ್ ಅಧ್ಯಕ್ಷೆ ಖೈರುನ್ನೀಸಾ ಸ್ವಾಗತಿಸಿ, ಸದಸ್ಯ ಕಾರ್ಯದರ್ಶಿ ಬಿನುಮೋನ್ ವಂದಿಸಿದರು.
ಕುಟುಂಬಶ್ರೀಯು ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಯತ್ತ: ಮನೆಗೊಂದು ಕೃಷಿ ಯಂತ್ರ ಯೋಜನೆ ಪ್ರಾರಂಭ
0
ಡಿಸೆಂಬರ್ 15, 2022
Tags




.jpeg)
