ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೊಳ್ಳಿಪರ್ಬ 2022 ಕಾರ್ಯಕ್ರಮವು ಡಿಸೆಂಬರ್ 24 ಮತ್ತು 25ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದ ಶ್ರೀ ಮದರುಮಾತೆ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಮೊಗೇರ ಸಂಘವು ಪ್ರಕೃತ ಬೆಳ್ಳಿ ಹಬ್ಬದ ಹೊಸ್ತಿಲಿನಲ್ಲಿದೆ. ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಮಹಿಳಾ ವಿಂಗ್ ಮತ್ತು ವಿವಿಧ ಪ್ರಾದೇಶಿಕ ಘಟಕಗಳ ಸಹಕಾರದೊಂದಿಗೆ ಇದರ ಪೂರ್ವಭಾವಿಯಾಗಿ ಒಂದು ವರ್ಷದಿಂದ ಅನೇಕ ಕಾರ್ಯಕ್ರಮಗಳು ನಡೆದುಬಂದಿವೆ. ಕ್ರೀಡಾ ಸ್ಪರ್ಧೆಗಳೂ ನಡೆದಿವೆ.
ಡಿ.24ರಂದು ಬೆಳಗ್ಗೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸುವರು. ಉದುಮ ಶಾಸಕ ಸಿ.ಎಚ್.ಕುಂಞಂಬು, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಹಾಗೂ ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ..25ರಂದು ಭಾನುವಾರ ಬೆಳಗ್ಗೆ 9 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, 1 ಗಂಟೆಯಿಂದ ಅಮಲ್ ರಾಜ್ ಪಿ.ಎಸ್. ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. 2 ಗಂಟೆಗೆ ನಡೆಯುವ ಸಮಾರೋಪ ಸಮಾರಂಭÀದಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಸಮಾಜದ ಜನಪ್ರತಿನಿಧಿಗಳು ಭಾಗವಹಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೊಗೇರ ಸಾಧಕರಿಗೆ ಗೌರವಾರ್ಪಣೆ, ಅಭಿನಂದನೆ, ಸನ್ಮಾನ ನಡೆಯಲಿದೆ.
ಡಿ.24, 25ರಂದು ನೀರ್ಚಾಲಿನಲ್ಲಿ ಮೊಗೇರ ಸಂಘದ ಬೊಳ್ಳಿಪರ್ಬ 2022
0
ಡಿಸೆಂಬರ್ 15, 2022
Tags




