ಮಂಜೇಶ್ವರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಉಪ್ಪಳ ಘಟಕದ ವಾರ್ಷಿಕೋತ್ಸವ ಇತ್ತೀಚೆಗೆ ಬಾಳಿಯೂರು ಅಯ್ಯಪ್ಪ ಮಂದಿರ ವಠಾರದಲ್ಲಿ ಸಡಗರದಿಂದ ಜರಗಿತು.
ಆ ಬಗೆಗೆ ನಡೆದ ಸಭಾ ಸಮಾರಂಭದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸೇವಾ ಸಂಸ್ಥೆಯು ಕಲಾ ಕ್ಷೇತ್ರದ ಅತೀದೊಡ್ಡ ಸೇವಾಸಂಸ್ಥೆಯಾಗಿದೆ. ಯಕ್ಷಗಾನ ಕಲಾವಿದರ ಪಾಲಿಗೆ ಕಾಮಧೇನುವಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆಗೆ ಕಾರಣಕರ್ತ ಹಾಗೂ ಬೆನ್ನೆಲುಬಾಗಿರುವ ಸತೀಶ ಶೆಟ್ಟಿ ಪಟ್ಲ ಅವರು ನಾಡಿನ ದಾನಿಗಳ ಸಹಾಯವನ್ನು ಬಡ ಯಕ್ಷಗಾನ ಕಲಾವಿದರ ಏಳ್ಗೆಗೆ ಜೋಡಿಸಿಕೊಂಡದ್ದು ಮಹಾನ್ ಕಾರ್ಯ. ನಾಡಿನ ಎಲ್ಲಾ ಜನತೆ ಪೌಂಡೇಶನ್ ಕಾರ್ಯದಲ್ಲಿ ಕೈ ಜೋಡಿಸ ಬೇಕಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ ಆರ್ ಶೆಟ್ಟಿ ಪೆÇಯ್ಯೆಲು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ರಾಧಾಕೃಷ್ಣ ಕೆ.ವಿ., ಕ್ಯಾಂಪೆÇ್ಕೀ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಹಾಲಿಂಗೇಶ್ವರ ಸೇವಾಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಭಾಗವಹಿಸಿದ್ದರು.
ಉಪ್ಪಳ ಘಟಕದ ಅಧ್ಯಕ್ಷ ಸುರೇಶ ಶೆಟ್ಟಿ ಕುಂಜತ್ತೂರು, ಮುತ್ತು ಶೆಟ್ಟಿ ಬಾಳಿಯೂರು ಉಪಸ್ಥಿತರಿದ್ದರು. ಯಕ್ಷಗಾನ ಗುರು ಶೇಖರ ಶೆಟ್ಟಿ ಬಾಯಾರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಉಪ್ಪಳ ಘಟಕದ ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ ಸ್ವಾಗತಿಸಿ, ಜಯಪ್ರಕಾಶ ಶೆಟ್ಟಿ ಅಂಗಡಿದಾರು ಕಾರ್ಯಕ್ರಮ ನಿರ್ವಹಿಸಿದರು.
ಉಪ್ಪಳ ಘಟಕವತಿಯಿಂದ ನಡೆಸಲಾದ ಉಚಿತ ಯಕ್ಷಗಾನ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಳಿಂದ “ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ” ಜರಗಿತು. ರಾತ್ರಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ “ಕಟೀಲು ಕ್ಷೇತ್ರ ಮಹಾತ್ಮೆ” ಯಕ್ಷಗಾನ ಬಯಲಾಟ ಜರಗಿತು.
ಬಾಳಿಯೂರಲ್ಲಿ ಪಟ್ಲ ಫೌಂಡೇಶನ್ ಉಪ್ಪಳ ಘಟಕ ಸಡಗರದ ವಾರ್ಷಿಕೋತ್ಸವ: ಯಕ್ಷಗಾನ ಗುರು ಶೇಖರ ಶೆಟ್ಟಿ ಬಾಯಾರು ಸನ್ಮಾನ
0
ಡಿಸೆಂಬರ್ 15, 2022
Tags




.jpg)
