ಕಾಸರಗೋಡು: 'ತೀಯಾ ಮಹಾಸಭಾ ಆರೂಢ-2022'ಕಾಸರಗೋಡು ಜಿಲ್ಲಾ ಸಮ್ಮೇಳನ 17ರಂದು ಪಾಲಕುನ್ನಿನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ಪಾಲಕುನ್ನು ಪೇಟೆಯಲ್ಲಿ ಸಾಂಸ್ಕøತಿಕ ಮೆರವಣಿಗೆಯೂ ನಡೆಯಲಿರುವುದಾಗಿ ಸಂಘಟನೆ ರಾಜ್ಯಾಧ್ಯಕ್ಷ ಗಣೇಶ ಅರಮಂಗಾನಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾಲಕುನ್ನು ಮಾಶ್ ಸಭಾಂಗಣದಲ್ಲಿ ನಡೆಯುವ ಸಾಂಸ್ಕೃತಿಕ ಸಮಾರಂಭಕ್ಕೆ ಪಾಲಕುನ್ನು ಕಳಗಂ ಭಗವತಿ ದೇವಸ್ಥಾನದ ಧರ್ಮದರ್ಶಿ ಸುನೀಶ್ ಪೂಜಾರಿ ಮತ್ತು ಕಪ್ಪನಕಲ್ ಕುಞÂಕಣ್ಣನ್ ಆಯತಾರ್ ಚಾಲನೆ ನೀಡುವರು.
ಶಾಸಕ ಸಿ.ಎಚ್.ಕುಞಂಬು ಸಮಾರಂಭ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಪಿ.ಸಿ.ವಿಶ್ವಂಭರನ್ ಪಣಿಕ್ಕರ್ ಅಧ್ಯಕ್ಷತೆ ವಹಿಸುವರು. ರಾಜ್ಯಾಧ್ಯಕ್ಷ ಗಣೇಶ ಅರಮಂಗನಮಿ ಸಂದೇಶ ನೀಡುವರು. ಮಾಜಿ ಡಿಜಿಪಿ ಡಾ.ಅಲೆಕ್ಸಾಂಡರ್ ಜೇಕಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಖ್ಯಾತ ಶಿಲ್ಪಿ ಕಾನಾಯಿ ಕುಞÂರಾಮನ್ ಅವರನ್ನು ಸನ್ಮಾನಿಸಲಾಗುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ನಿರ್ದೇಶಕ ವಕೀಲ ಪ್ರಕಾಶ್ ಬಾಬು ಉದ್ಘಾಟಿಸುವರು. ಜಿಲ್ಲಾ ಕೋಶಾಧಿಕಾರಿ ಎಂ.ಕೆ.ಕುಞÂಕೃಷ್ಣನ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಪಿ. ಸಿ ವಿಶ್ವಂಭರನ್ ಪಣಿಕ್ಕರ್, ರಾಜ್ಯ ಮಾಧ್ಯಮ ಪ್ರಕೋಷ್ಠದ ಸಂಯೋಜಕ ಚಂದ್ರನ್ ಪುದುಕೈ, ಜಿಲ್ಲಾ ಉಪಾಧ್ಯಕ್ಷರಾದ ರಾಘವನ್ ತಿಮಿರಿ, ಕೆ. ವಿ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಾಳೆ ಕಾಸರಗೋಡು ತೀಯಾ ಮಹಾಸಭಾ ಆರೂಢ-2022 ಸಮಾವೇಶ
0
ಡಿಸೆಂಬರ್ 15, 2022
Tags




