ಕಾಸರಗೋಡು: ಪ್ರವಾಸೋದ್ಯಮಕ್ಕೆ ಹೆಚ್ಚಿನ ವೇಗ ಲಭಿಸುವ ನಿಟ್ಟಿನಲ್ಲಿ ಹೊಸದುರ್ಗದ ಕೈಟ್‍ಬೀಚನ್ನು ಸಿದ್ಧಗೊಳಿಸಲಾಗುತ್ತಿದೆ. ಕೈಟ್ ಬೀಚ್ ಕಾಮಗಾರಿ ನಿರ್ಮಾಣಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರ ಪ್ರವಾಸಿಗರಿಗಾಗಿ ತೆರೆದುಕೊಳ್ಳಲಿದೆ. ಉತ್ತರದ ತಲಪ್ಪಾಡಿಯಿಂದ ದಕ್ಷಿಣದ ತಾಯಲ್ ಕಡಪ್ಪುರ ವರೆಗೆ 85ಕಿ.ಮೀ ಕರಾವಳಿ ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರಮುಖ ಆಕರ್ಷಣೆಯ ಕೇಂದ್ರವನ್ನಾಗಿಸುವ ರೀತಿಯಲ್ಲಿ ಹೊಸದುರ್ಗದ ಕೈಟ್ ಬೀಚನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ)ನೇತೃತ್ವದಲ್ಲಿ ಕೈಟ್ ಬೀಚ್ ಕಾಮಗಾರಿ ನಡೆಯುತ್ತಿದೆ.
ಗಾಳಿಪಟ ಹಾರಿಸೋಣ
ಜಿಲ್ಲೆಯ ವಿವಿಧೆಡೆ ಅನೇಕ ಗಾಳಿಪಟ ಸ್ಪರ್ಧೆಗಳು ನಡೆಯುತ್ತಿದ್ದು, ಕಳೆದ ಹಲವು ವರ್ಷಗಳಿಂದ ಬೇಕಲ್ ಬೀಚ್ ನಲ್ಲಿ ಗಾಳಿಪಟ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಹೊಸದುರ್ಗದ ಗಾಳಿಪಟ ಬೀಚ್ ಪೂರ್ಣಗೊಂಡ ನಂತರ, ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಇಲ್ಲಿ ನಡೆಸುವ ರೀತಿಯಲ್ಲಿ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ಇದರಿಂದ ಹೆಚ್ಚು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಕರಾವಳಿಯಲ್ಲಿ ಗಾಳಿಪಟ ಉತ್ಸವ ನಡೆಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಡಿಟಿಪಿಸಿ ಎರಡನೇ ಹಂತದಲಿವಿಲ್ಲಿ ವಾಟರ್ ಪಾರ್ಕ್ ನಿರ್ಮಾಣದ ಗುರಿಯಿರಿಸಿದೆ. ಕೈಟ್ ಬೀಚ್ ನಿರ್ಮಾಣದ ಶೇಕಡಾ 80 ರಷ್ಟು ಪೂರ್ಣಗೊಂಡಿದ್ದು, ಯೋಜನೆಗೆ ಒಟ್ಟು 98.74 ಲಕ್ಷ ರೂ. ವಿನಿಯೋಗಿಸಲಾಗುದೆ.
ಹೊಸದುರ್ಗದಲ್ಲಿ ಸಿದ್ಧಗೊಳ್ಳುತ್ತಿದೆ ಕೈಟ್ ಬೀಚ್: ಗಾಳಿಪಟದೊಂದಿಗೆ ಸಮುದ್ರ ವೀಕ್ಷಣೆಗೊಂದು ಅವಕಾಶ
0
ಡಿಸೆಂಬರ್ 15, 2022
Tags





