ಕಾಸರಗೋಡು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರಚಂದ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪಡಿತರ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಯಿತು.
ಈ ಸಂದರ್ಭ ಪಡಿತರ ಅಂಗಡಿಗಳಲ್ಲಿನ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಧಿಕರಿ, ಪಡಿತರ ಚೀಟಿದಾರರ ಜತೆ ಸಂವಾದ ನಡೆಸಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸುಧಾರಣೆಗೆ ಶಿಫಾರಸುಗಳನ್ನು ಒಳಗೊಂಡಂತೆ ತಪಾಸಣಾ ವರದಿಯನ್ನು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಜಿಲ್ಲಾ ಸರಬರಾಜು ಅಧಿಕಾರಿ ಎನ್.ಜೆ.ಶಾಜಿಮೋನ್, ತಾಲೂಕು ಪೂರೈಕೆ ಅಧಿಕಾರಿಗಳಾದ ಕೆ.ವಿ.ದಿನೇಶನ್, ಕೆ.ಎನ್.ಬಿಂದು, ಪಡಿತರ ನಿರೀಕ್ಷಕರಾದ ಪಿ.ವಿ.ಶ್ರೀನಿವಾಸನ್, ಜಿ.ಪ್ರಕಾಶ್ ಪಿಳ್ಳೆ, ಕೆ.ಪಿ.ಬಾಬು, ಪಿ.ಹರಿದಾಸ್, ಎಸ್.ಶಾಜಿ, ಯೋಜನಾ ವ್ಯವಸ್ಥಾಪಕರಾದ ಸುಚಿತ್ರಾ, ಚಾಲಕರಾದ ಅನ್ವರ್, ಪಿ.ಎ.ನಿಶಾದ್ ಜತೆಗಿದ್ದರು.
ಪಡಿತರ ಅಂಗಡಿಗಳಿಗೆ ಜಿಲ್ಲಾಧಿಕಾರಿ ಭೇಟಿ, ಮೂಲಸೌಕರ್ಯ ಪರಿಶೀಲನೆ, ಕಾರ್ಡುದಾರರ ಜತೆ ಸಂವಾದ
0
ಡಿಸೆಂಬರ್ 15, 2022
Tags





