ಕಾಸರಗೋಡು: ಅಸಾಂಪ್ರದಾಯಿಕ ಇಂಧನ ಸಂರಕ್ಷಣೆ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಗುರುತಿಸಲ್ಪಟ್ಟಿದ್ದು, ರಾಜ್ಯ ಅಕ್ಷಯ ಊರ್ಜಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಬಗ್ಗೆ ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ರಾಜ್ಯ ಅಕ್ಷಯ ಊರ್ಜಾ ಪ್ರಶಸ್ತಿ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಯಿ ಚಾಕೋ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಕೆ. ಪ್ರದೀಪನ್ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಅಧೀನ ಸಂಸ್ಥೆಗಳಿಗೆ ಹಂತ ಹಂತವಾಗಿ ಸೋಲಾರ್ ಸಿಸ್ಟಮ್ ಅಳವಡಿಕೆ ಕೆಲವನ್ನು ನಡೆಸಲಾಗಿದ್ದು, 87 ಶಾಲೆಗಳು, 52 ವಿವಿಧ ಸಸ್ಥೆಗಳು ಮತ್ತು ಮೂರು ಆಸ್ಪತ್ರೆಗಳಲ್ಲಿ ಸಓಲಾರ್ ಅಳವಡಿಸಲಾಗಿದೆ. ಉಳಿದ ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಕೆಲಸ ಪೂರ್ತಿಗೊಂಡಾಗ ಜಿಲ್ಲಾ ಪಂಚಾಯತ್ ತನ್ನ ಎಲ್ಲಾ ಘಟಕಗಳಲ್ಲಿ ಸೋಲಾರ್ ವಿದ್ಯುದ್ದೀಕರಣವನ್ನು ಜಾರಿಗೊಳಿಸಿದ ದೇಶದ ಮೊದಲ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಅಸಾಂಪ್ರದಾಯಿಕ ಇಂಧನ: ಕಾಸರಗೋಡು ಜಿ.ಪಂ.ಗೆ ಅಕ್ಷಯ ಊರ್ಜಾ ಪ್ರಶಸ್ತಿ
0
ಡಿಸೆಂಬರ್ 15, 2022
Tags





