ಕಾಸರಗೋಡು: ರಾಜ್ಯ ಕ್ರೀಡಾ ಪರಿಷತ್ತಿನ ಅಧೀನದಲ್ಲಿ 2023-24ನೇ ಸಾಲಿನ ವಿವಿಧ ಜಿಲ್ಲೆಗಳ ಕ್ರೀಡಾ ಅಕಾಡೆಮಿಗಳಿಗೆ ಅಥ್ಲೆಟಿಕ್ಸ್, ಫುಟ್‍ಬಾಲ್, ವಾಲಿಬಾಲ್ ಮತ್ತು ಬಾಸ್ಕೆಟ್‍ಬಾಲ್‍ಗಾಗಿ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ಜನವರಿ 13 ರಂದು ಬೆಳಗ್ಗೆ 8 ರಿಂದ ನೀಲೇಶ್ವರದ ಇ ಎಂ ಎಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
2023 - 24ನೇ ಶೈಕ್ಷಣಿಕ ವರ್ಷದ 7 ಮತ್ತು 8ನೇ ತರಗತಿಗಳಿಗೆ, ಪ್ಲಸ್ ವನ್, ಕಾಲೇಜು ಪ್ರಥಮ ವರ್ಷದ ಪದವಿ, 14 ವರ್ಷದೊಳಗಿನ ಬಾಲಕಿಯರ ಫುಟ್‍ಬಾಲ್ ಅಕಾಡೆಮಿಗೆ ಕ್ರೀಡಾಳುಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಟ್ರಯಲ್ಸ್‍ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಅರ್ಹತಾ ಪ್ರಮಾಣಪತ್ರ, ಕ್ರೀಡಾ ಶ್ರೇಷ್ಠತೆ ಪ್ರಮಾಣಪತ್ರ, ಶಾಲಾ ಅಧಿಕಾರಿಗಳಿಂದ ದೃಢೀಕರಿಸಿದ ಅರ್ಹತಾ ಪ್ರಮಾಣಪತ್ರ, 2 ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಮತ್ತು ಸ್ಪೋಟ್ರ್ಸ್ ಕಿಟ್‍ನೊಂದಿಗೆ ಅಂದು ಬೆಳಗ್ಗೆ 8 ಗಂಟೆಗೆ ನೀಲೇಶ್ವರದ ಇ ಎಂ ಎಸ್ ಕ್ರೀಡಾಂಗಣಕ್ಕೆ ತಲುಪಬೇಕು. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(04994 255521)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜ. 13 ರಂದು ಕ್ರೀಡಾ ಅಕಾಡೆಮಿ ಆಯ್ಕೆ ಟ್ರಯಲ್ಸ್
0
ಜನವರಿ 08, 2023
Tags




