ಕಾಸರಗೋಡು: ನೆಹರು ಯುವ ಕೇಂದ್ರ ವತಿಯಿಂದ ಜನವರಿ 18 ರಿಂದ 20 ರವರೆಗೆ ರಾಣಿಪುರಂನಲ್ಲಿ ನಡೆಯುವ ಯುವಜನ ನೇತೃತ್ವ ಸಾಮಾಜಿಕ ಅಭಿವೃದ್ಧಿ ತರಬೇತಿ ಶಿಬಿರದಲ್ಲಿ 15 ರಿಂದ 29 ವರ್ಷ ಪ್ರಾಯವಿರುವ ಕಾಸರಗೋಡು ನಿವಾಸಿಗಳಾದ ಯುವಕ, ಯುವತಿಯರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 3 ದಿನಗಳ ಕಾಲ ನಡೆಯುವ ಈ ವಸತಿ ಶಿಬಿರದಲ್ಲಿ 40 ಮಂದಿಗೆ ಭಾಗವಹಿಸ ಬಹುದಾಗಿದ್ದು, ನಾಯಕತ್ವ, ಸರಕಾರದ ಯೋಜನೆಗಳು, ವಿಪತ್ತು ಪರಿಹಾರ ಚಟುವಟಿಕೆಗಳಂತಹ ವಿಷಯಗಳನ್ನು ಆಧಾ ರ ವಾಗಿರಿಸಿ ತರಗತಿಗಳು, ಚರ್ಚೆಗಳು, ಗಣ್ಯರೊಂದಿಗೆ ಸಂದರ್ಶನ ಮತ್ತು ಟ್ರೆಕ್ಕಿಂಗ್ ಶಿಬಿರದ ವೈಶಿಷ್ಟ್ಯವಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(7736426247, 8136921959, 7034672158ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನೆಹರು ಯುವಕೇಂದ್ರ ವತಿಯಿಂದ ಸಾಮಾಜಿಕ ಅಭಿವೃದ್ಧಿ ತರಬೇತಿ ಶಿಬಿರ
0
ಜನವರಿ 08, 2023
Tags





