ಪತ್ತನಂತಿಟ್ಟ: ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಆಹಾರ ವಿಷಬಾಧೆಗೊಳಗಾಗಿರುವುದು ವರದಿಯಾಗಿದೆ.
ಪತ್ತನಂತಿಟ್ಟದ ಚಂದನಪಿಲ್ಲಿ ರಾಯ್ ಡೇಲ್ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರ ವಿಷವಾಗಿದೆ.
ಕಳೆದ ಶುಕ್ರವಾರ ಶಾಲೆಯಲ್ಲಿ ವಿತರಿಸಿದ ಚಿಕನ್ ಬಿರಿಯಾನಿ ಸೇವಿಸಿದ್ದರು. ಶಾಲಾ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಆಹಾರ ವಿತರಿಸಲಾಗಿತ್ತು. ತಿಂದ ಮರುದಿನದಿಂದಲೇ ಅನೇಕರು ಅಸ್ವಸ್ಥರಾಗತೊಡಗಿದರು. ಬಳಿಕ ಅವರನ್ನು ಜಿಲ್ಲೆಯ ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪತ್ತನಂತಿಟ್ಟದ ಕೊಡುಮಾನ್‍ನಲ್ಲಿರುವ ಹೋಟೆಲ್‍ನಿಂದ ಶಾಲೆಗೆ ಚಿಕನ್ ಬಿರಿಯಾನಿ ತರಲಾಗಿತ್ತು. ಹೋಟೆಲ್ ಮಾಲೀಕರ ಪ್ರಕಾರ, ಬೆಳಿಗ್ಗೆ ಶಾಲೆಗೆ ತಂದ ಬಿರಿಯಾನಿಯನ್ನು ಸಂಜೆ 6 ಗಂಟೆಯ ನಂತರ ಮಕ್ಕಳಿಗೆ ನೀಡಲಾಗಿತ್ತು ಎನ್ನಲಾಗಿದೆ. ಆಹಾರ ತಡವಾಗಿ ಬಡಿಸಿದ ಕಾರಣ ಆಹಾರ ವಿಷ ಉಂಟಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನ.
ಮತ್ತೊಂದು ಆಹಾರ ವಿಷಬಾಧೆ ಪ್ರಕರಣ: ಚಿಕನ್ ಬಿರಿಯಾನಿ ಸೇವಿಸಿ 13 ಮಕ್ಕಳು ಹಾಗೂ ಶಿಕ್ಷಕಿ ಆಸ್ಪತ್ರೆಗೆ ದಾಖಲು
0
ಜನವರಿ 08, 2023





