ಕೊಚ್ಚಿ: ಕಾಸರಗೋಡಿನ ಅಂಜುಶ್ರೀ ಸಾವು ವಿμÁಹಾರ ಸೇವನೆಯಿಂದಲ್ಲ ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಲಿವರ್ ವೈಫಲ್ಯವೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.
ಅಂಜುಶ್ರೀ ಅವರ ಸಾವಿಗೆ ವಿಷಾಹಾರ ಕಾರಣ ಎಂದು ಸಾಬೀತುಪಡಿಸಲು ಮೃತದೇಹದಿಂದ ಏನೂ ಪತ್ತೆಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸಂಪೂರ್ಣ ಯಕೃತ್ತಿನ ವೈಫಲ್ಯವು ಸಾವಿಗೆ ಕಾರಣವಾಯಿತು. ಅಂಜುಶ್ರೀ ಜಾಂಡೀಸ್ ನಿಂದ ಬಳಲುತ್ತಿದ್ದರು. ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆಯಾಗಿದೆ.
19 ವರ್ಷದ ಅಂಜುಶ್ರೀ ಸೇವಿಸಿದ ಮಾಂಸಾಹಾರ ವಿಷವಾಗಿ ಪರಿವರ್ತನೆಗೊಂಡು ಅಸ್ವಸ್ಥಗೊಂಡಳು. ಡಿಸೆಂಬರ್ 31ರ ಮಧ್ಯಾಹ್ನ ಅಲ್ರೊಮ್ಯಾನ್ಸಿಯಾ ಹೊಟೇಲ್‍ನಿಂದ ಖರೀದಿಸಿದ ಆಹಾರ ಸೇವಿಸಿದ್ದರು. ಮರುದಿನವೇ ಅವರಿಗೆ ದೈಹಿಕ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅಂಜುಶ್ರೀ ಶನಿವಾರ ಬೆಳಗ್ಗೆ ಸಾವಿಗೆ ಶರಣಾಗಿದ್ದಾಳೆ.
ಆಹಾರ ವಿಷವಾದುದಲ್ಲವಂತೆ!: ಕಾಮಾಲೆ ಕಾರಣ ಎಂದ ಅಂಜುಶ್ರೀ ಅವರ ಮರಣೋತ್ತರ ಪರೀಕ್ಷೆ ವರದಿ
0
ಜನವರಿ 08, 2023
Tags





