HEALTH TIPS

ಒಂದು ಲಕ್ಷಕ್ಕಿಂತ ಹೆಚ್ಚಿನ ಹೋಟೆಲ್‍ಗಳ ತಪಾಸಣೆಗೆ ಕೇವಲ 140 ಅಧಿಕಾರಿಗಳು ಮಾತ್ರ!: ಆಹಾರ ಗುಣಮಟ್ಟ ಪರಿಶೀಲನಾ ತಜ್ಞರ ಕೊರತೆ


               .ಕೊಚ್ಚಿ: ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ಹೋಟೆಲ್‍ಗಳಲ್ಲಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ರಾಜ್ಯದಲ್ಲಿರುವ ಅಧಿಕಾರಿಗಳ ಸಂಖ್ಯೆ ಒಟ್ಟು 140 ಮಂದಿ ಎಂಬ ಅಂಕಿಅಂಶ ಕಳವಳಕ್ಕೀಡುಮಾಡಿದೆ.
            ಒಬ್ಬ ಅಧಿಕಾರಿಯಿಂದ ಸರಾಸರಿ 715 ಹೋಟೆಲ್ ಪರಿಶೀಲಿಸಲಾಗುತ್ತದೆ. ಇದೇ ವೇಳೆ, ಆರೋಗ್ಯ ಸಚಿವರು ತಂತ್ರಜ್ಞಾನದ ಆಧಾರದ ಮೇಲೆ ಆಹಾರ ತಪಾಸಣೆಗಾಗಿ ಆರೋಗ್ಯ ಮೇಲ್ವಿಚಾರಕರಿಂದ ಕಿರಿಯ ಆರೋಗ್ಯ ನಿರೀಕ್ಷಕರವರೆಗೆ ಸುಮಾರು 5,000 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎನ್ನುತ್ತಾರೆ.
         "ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿದ್ದೇವೆ. ಒಂದು ಕ್ಷೇತ್ರದ ಎಲ್ಲಾ ಹೋಟೆಲ್‍ಗಳನ್ನು ಒಬ್ಬರು ಹೇಗೆ ಪರಿಶೀಲಿಸಬಹುದೆಂಬುದು ಗೊತ್ತಿಲ್ಲ.? ಇಬ್ಬರು ಸಹಾಯಕರು ಇರಬೇಕಾದಲ್ಲಿ  ಸಾಮಾನ್ಯವಾಗಿ ಒಬ್ಬರೂ ಇಲ್ಲ. ಇದನ್ನು ಅರ್ಥಮಾಡಿಕೊಳ್ಳದೆ ಸಾರ್ವಜನಿಕರು ನಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆರೋಪ ಕೇಳಿ ಬೇಸತ್ತಿದ್ದೇವೆ’ ಎಂದು  ಆಹಾರ ಸುರಕ್ಷತೆಯ ನೋಡಲ್ ಅಧಿಕಾರಿಯೊಬ್ಬರು 'ಸಮರಸ ಸುದ್ದಿಗೆ’ ತಿಳಿಸಿದ್ದಾರೆ.
         ರಾಜ್ಯ ರಚನೆಯ ನಂತರ, ಮದ್ರಾಸ್ ಆರೋಗ್ಯ ಕಾಯಿದೆಯು ತ್ರಿಶೂರ್‍ನಿಂದ ಕಾಸರಗೋಡಿಗೆ ಮತ್ತು ತಿರು-ಕೊಚ್ಚಿ ಸಾರ್ವಜನಿಕ ಆರೋಗ್ಯ ಕಾಯಿದೆಯು ಎರ್ನಾಕುಳಂನಿಂದ ತಿರುವನಂತಪುರಂವರೆಗೆ ಆಹಾರ ಸುರಕ್ಷತೆಗಾಗಿ ಅನ್ವಯಿಸುತ್ತದೆ. ಆ ಸಮಯದಲ್ಲಿ, ರಾಜ್ಯದ ಎಲ್ಲಾ ಆರೋಗ್ಯ ನಿರೀಕ್ಷಕರು ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಆಹಾರವನ್ನು ಪರೀಕ್ಷಿಸಲು ಅಧಿಕಾರ ಹೊಂದಿದ್ದರು.
           ಆದರೆ 2011 ರಲ್ಲಿ ಸಂಸತ್ತು ಕೇಂದ್ರ ಆಹಾರ ಸುರಕ್ಷತಾ ಕಾಯ್ದೆಯನ್ನು ಅಂಗೀಕರಿಸಿದಾಗ, ಮದ್ರಾಸ್ ಕಾಯಿದೆಯ ಸೆಕ್ಷನ್ 112 ರಿಂದ 124 ಮತ್ತು ತಿರು-ಕೊಚ್ಚಿ ಕಾಯಿದೆಯ 114 ರಿಂದ 126 ರ ವರೆಗೆ ರದ್ದುಗೊಳಿಸಲಾಯಿತು. ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾತ್ರ ತಪಾಸಣೆ ಮಾಡುವ ಅಧಿಕಾರ ನೀಡಲಾಯಿತು. ಅವರಂತೆ ಕೇರಳದಲ್ಲಿ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರಂತೆ  ಕೇವಲ 140 ಮಂದಿ ಇದ್ದಾರೆ. ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿ ಇದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಆರೋಗ್ಯ ನಿರೀಕ್ಷಕರಿಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಮತ್ತು ಸಂಬಳವನ್ನು ಹೊಂದಿದ್ದಾರೆ. ಆರೋಗ್ಯ ನಿರೀಕ್ಷಕರ ಕೆಲಸವು ಆಹಾರ ಸಂಸ್ಕರಣಾ ಸಂಸ್ಥೆಗಳ ನೈರ್ಮಲ್ಯ ತಪಾಸಣೆ ಮತ್ತು ಇತರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಗೆ ಸೀಮಿತವಾಗಿದೆ.
         ಆದರೂ ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು ಆಹಾರ ತಪಾಸಣೆ ಮುಂದುವರಿಸಿದ್ದಾರೆ. ಆದರೆ ಹೋಟೆಲ್ ಮಾಲೀಕರ ಸಂಘವು ಕಾನೂನು ಅಂಶವನ್ನು ಎತ್ತಿ ಹಿಡಿಯುವ ಮೂಲಕ ಇದನ್ನು ವಿರೋಧಿಸಿತು. ಈ ಕುರಿತು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳಿವೆ. ಹೈಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ತೀರ್ಪಿಗಾಗಿ ಕಾಯಲಾಗುತ್ತಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries