ಮಂಜೇಶ್ವರ: ಶಾಲಾ ಬಸ್ ಮತ್ತು ದ್ವಿಚಕ್ರವಾಹನ ಪರಸ್ಪರ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣರಾಗಿ ಮೃತರಾದ ಘಟನೆ ಮೀಯಪದವಲ್ಲಿ ಇಂದು ಬೆಳಿಗ್ಗೆ ಶೋಕಸಾಗರ ಸೃಷ್ಟಿಸಿದೆ. ಬೆಳಿಗ್ಗೆ 8.15ರ ಸುಮಾರಿಗೆ ಘಟನೆ ಸಂಭವಿಸಿದೆ. ಮೃತ ಇಬ್ಬರು ವಿದ್ಯಾರ್ಥಿಗಳೂ ಮಂಗಳೂರು ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಬೈಕ್ ಸವಾರರಾದ ಮೀಯಪದವು ಬೆಜ್ಜಂಗಳ ನಿವಾಸಿ ಸುರೇಶ್ ಎಂಬವರ ಪುತ್ರ ಅಭಿ(20) ಹಾಗೂ ಮೀಯಪದವು ಹರೀಶ್ ಶೆಟ್ಟಿ ಎಂಬವರ ಪುತ್ರ ಪ್ರತೀಶ್ (20) ಮೃತರಾದ ದುರ್ದೈವಿಗಳು. ಇವರ ಜೊತೆಗಿದ್ದ ನಮಿತ್ ಕುಮಾರ್ ಎಂಬವರು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇರ್ಶವರ ಪೋಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಬಸ್ ಗೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಮೀಯಪದವಲ್ಲಿ ಭೀಕರ ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು
0
ಜನವರಿ 13, 2023
Tags





