HEALTH TIPS

2023-24ನೇ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಬೆಳವಣಿಗೆ ನಿರೀಕ್ಷೆ: ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ

 

           ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7 ಮತ್ತು 2021-22 ರ ಆರ್ಥಿಕ ವರ್ಷದಲ್ಲಿ ಶೇಕಡಾ 8.7ಕ್ಕೆ ಹೋಲಿಸಿದರೆ, ಭಾರತದ ಆರ್ಥಿಕ ಸಮೀಕ್ಷೆ (2022-23) ಪ್ರಕಾರ ದೇಶದ ಆರ್ಥಿಕತೆಯು 2023-24 ರಲ್ಲಿ ಶೇಕಡಾ 6.5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

               ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 6.8 ಹಣದುಬ್ಬರ ಪ್ರಕ್ಷೇಪಣವು ಖಾಸಗಿ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯಾಗಿಲ್ಲ ಎಂದು ಸೀತಾರಾಮನ್ ದೇಶದ ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟರು.

       ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಿದ್ಧಪಡಿಸಿದ ಮತ್ತು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಕೇಂದ್ರ ಬಜೆಟ್ ಮಂಡನೆಗೆ ಮುನ್ನ ಆರ್ಥಿಕ ಸಮೀಕ್ಷೆಯ ದಾಖಲೆಗಳನ್ನು ಇಂದು ಲೋಕಸಭೆಯಲ್ಲಿ ವಿತ್ತ ಸಚಿವೆ ಮಂಡಿಸಿದರು. ದೇಶದ ಆರ್ಥಿಕತೆಯ ಸ್ಥಿತಿ ಮತ್ತು ಪ್ರಸ್ತುತ ಹಣಕಾಸಿನ ವಿವಿಧ ಸೂಚಕಗಳ ಒಳನೋಟಗಳನ್ನು ಆರ್ಥಿಕ ಸಮೀಕ್ಷೆ ನೀಡುತ್ತದೆ. 

              ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿನ ಕುಸಿತವನ್ನು ಕಾಣಬಹುದು ಎಂದು ಇಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಶೇಕಡಾ 6.8 ರಿಂದ ಶೇಕಡಾ 6.1 ಕ್ಕೆ ಯೋಜಿಸಿದೆ.

               IMF ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನ ಜನವರಿ ನವೀಕರಣವನ್ನು ಬಿಡುಗಡೆ ಮಾಡಿದೆ, ಅದರ ಪ್ರಕಾರ ಜಾಗತಿಕ ಬೆಳವಣಿಗೆಯು 2022 ರಲ್ಲಿ ಅಂದಾಜು 3.4 ಶೇಕಡಾದಿಂದ 2023 ರಲ್ಲಿ 2.9 ಶೇಕಡಾಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ, ನಂತರ 2024 ರಲ್ಲಿ 3.1 ಶೇಕಡಾಕ್ಕೆ ಏರಿಕೆಯಾಗುತ್ತದೆ ಎಂದು ಹೇಳಿದೆ.

                2022 ರಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು 2022-23 ರಲ್ಲಿ ಭಾರತದ GDP ಬೆಳವಣಿಗೆಯನ್ನು ಶೇಕಡಾ 8ರಿಂದ ಶೇಕಡಾ 8.5 ಎಂದು ಅಂದಾಜಿಸಿದೆ, ಇದು ವ್ಯಾಪಕವಾದ ಕೋವಿಡ್ ಲಸಿಕೆ ಪೂರೈಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಲಭ್ಯತೆಗಳನ್ನು ಅವಲಂಬಿಸಿದೆ ಎಂದು ಸರ್ಕಾರ ಭಾವಿಸಿದೆ. ಬಂಡವಾಳ ವೆಚ್ಚ, ದೇಶದ ಉದ್ಯೋಗ ಪ್ರಮಾಣವನ್ನು ಕೂಡ ಒಳಗೊಂಡಿದೆ. 

                  ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ: ಕೇಂದ್ರ ವಾರ್ಷಿಕ ಬಜೆಟ್ ಮಂಡನೆಗೆ ಮುನ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದು ಸಂಪ್ರದಾಯ. ಅದರಂತೆ ಮೊದಲ ಆರ್ಥಿಕ ಸಮೀಕ್ಷೆಯು 1950-51ರಲ್ಲಿ ಅಸ್ತಿತ್ವಕ್ಕೆ ಬಂದಿತು, ಅದು ಬಜೆಟ್ ದಾಖಲೆಗಳ ಭಾಗವಾಗಿತ್ತು. 1960 ರ ದಶಕದಲ್ಲಿ, ಇದನ್ನು ಬಜೆಟ್ ದಾಖಲೆಗಳಿಂದ ಪ್ರತ್ಯೇಕಿಸಿ ಕೇಂದ್ರ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಮಂಡಿಸಲಾಯಿತು.

                 ನಾಳೆ ಮಂಡನೆಯಾಗಲಿರುವ ಬಜೆಟ್ 2023ರಲ್ಲಿ 2024ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಲೋಕಸಭೆ ಚುನಾವಣೆಯೊಂದಿಗೆ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿರಬಹುದು.

                 ಈ ಬಾರಿ ಬಜೆಟ್ ದಾಖಲೆಗಳು ಆಂಡ್ರಾಯ್ಡ್ ಮತ್ತು ಆಪಲ್ ಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್'ನಲ್ಲಿ ಲಭ್ಯವಿರುತ್ತವೆ.


 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries