ಆಂಧ್ರಪ್ರದೇಶ: ವಿಶಾಖಪಟ್ಟಣಂ ಆಂಧ್ರಪ್ರದೇಶದ ನೂತನ ರಾಜಧಾನಿ ಎಂದು ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ನೂತನ ರಾಜಧಾನಿಯಾಗಲಿರುವ ವಿಶಾಖಪಟ್ಟಣಂ ನಗರಕ್ಕೆ ನಿಮ್ಮೆಲ್ಲರಿಗೂ ಆಹ್ವಾನ ನೀಡಲು ಬಂದಿದ್ದೇನೆ. ಕೆಲ ತಿಂಗಳುಗಳ ಬಳಿಕೆ ವಿಶಾಖಪಟ್ಟಣಂಗೆ ನಾನು ವರ್ಗಾವಣೆ ಆಗುತ್ತೇನೆ. ಮಾರ್ಚ್ 3 ಮತ್ತು 4ರಂದು ವಿಶಾಖಪಟ್ಟಣಂನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗವನ್ನು ಆಯೋಜಿಸುತ್ತಿದ್ದೇವೆ ಎಂದು ಹೈದರಾಬಾದ್ನಲ್ಲಿ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ. ಆಂದ್ರದ ರಾಜಧಾನಿಯಾಗಿ ಈಗಾಗಲೇ ಅಮರಾವರಿ ಎಂದಿದೆ.
ವರದಿಯ ಪ್ರಕಾರ ರಾಜ್ಯಪಾಲರ ಕಚೇರಿ ಮುಂದಿನ ದಿನಗಳಲ್ಲಿ ವಿಶಾಖಪಟ್ಟಣಂನಿಂದ ಕಾರ್ಯನಿರ್ವಹಿಸಲಿದೆ. ಆದರೆ ಶಾಸಕಾಂಗ ಮಾತ್ರ ಹಿಂದಿನ ರಾಜಧಾನಿ ಅಮರಾವತಿಯಿಂದಲೇ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ವಿಶಾಖಪಟ್ಟಣವನ್ನು ಅಧಿಕೃತವಾಗಿ ರಾಜಧಾನಿಯನ್ನಾಗಿ ಮುಂದಿನ ದಿನಗಳಲ್ಲಿ ವೈ ಎಸ್ ಜಗನ್ಮೋಹನ್ ರೆಡ್ಡಿ ಘೋಷಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.





