HEALTH TIPS

ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ

 ವರ್ಷದ ಎರಡನೇ ತಿಂಗಳ ಫೆಬ್ರವರಿಗೆ ಕಾಲಿಡುತ್ತಿದ್ದೇವೆ. ಪಂಚಾಂಗದ ಪ್ರಕಾರ, ಫೆಬ್ರವರಿ ತಿಂಗಳು ಮಾಘ ಮಾಸದ ಶುಕ್ಲ ಪಕ್ಷ ಏಕಾದಶಿ ತಿಥಿಯಿಂದ ಪ್ರಾರಂಭವಾಗಿ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯೊಂದಿಗೆ ಕೊನೆಗೊಳ್ಳುತ್ತದೆ.

ಆದ್ದರಿಂದ ಈ ತಿಂಗಳಲ್ಲಿ ಮಾಘ ಪೂರ್ಣಿಮೆ, ಮಹಾಶಿವರಾತ್ರಿ, ಜಯ ಏಕಾದಶಿಯಂತಹ ಅನೇಕ ಹಬ್ಬ, ವ್ರತಗಳನ್ನು ಆಚರಣೆ ಮಾಡಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಫೆಬ್ರವರಿ 2023 ರಲ್ಲಿರುವ ಹಬ್ಬಗಳು ಹಾಗೂ ವ್ರತಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

1 ಫೆಬ್ರವರಿ 2023 ಬುಧವಾರ ಜಯ ಏಕಾದಶಿ ಮತ್ತು ಭೀಷ್ಮ ದ್ವಾದಶಿ: ಈ ದಿನ ವಿಷ್ಣುವನ್ನು ಪೂಜಿಸುವುದರ ಜೊತೆಗೆ ಉಪವಾಸ ಇರಬೇಕೆಂಬ ನಿಯಮವಿದೆ. ಅದೇ ರೀತಿ ಜಯ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಪಾಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಈ ಏಕಾದಶಿಯು ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಮತ್ತೊಂದೆಡೆ, ಭೀಷ್ಮ ದ್ವಾದಶಿಯ ದಿನ, ಪೂರ್ವಜರಿಗೆ ಮೀಸಲಿಡಲಾಗಿದೆ. ಈ ದಿನ ಶ್ರೀ ಕೃಷ್ಣನನ್ನು ಪೂಜಿಸುವ ಸಂಪ್ರದಾಯವೂ ಇದೆ.

 2 ಫೆಬ್ರವರಿ 2023, ಗುರುವಾರ ಗುರು ಪ್ರದೋಷ ವ್ರತ: ಈ ಮಾಸದಲ್ಲಿ ಗುರುವಾರದಂರು ಪ್ರದೋಷ ವ್ರತ ಬಂದಿದ್ದು, ಇದನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ.

5 ಫೆಬ್ರವರಿ 2023 ಭಾನುವಾರ ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆ, ಗುರು ರವಿದಾಸ್ ಜಯಂತಿ:
ಮಾಘ ಪೂರ್ಣಿಮೆಯ ಮಹತ್ವ ಏನೆಂದರೆ ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಮನುಷ್ಯ ರೋಗಗಳಿಂದ ಮುಕ್ತನಾಗುತ್ತಾನೆ. ಈ ದಿನ ಎಳ್ಳನ್ನು ದಾನ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಒಬ್ಬರನ್ನೊಬ್ಬರು ಪ್ರೀತಿಸಲು ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಲು ಕಲಿಸಿದ ಸಂತ ರವಿದಾಸರ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ.
9 ಫೆಬ್ರವರಿ 2023, ಗುರುವಾರ ದ್ವಿಜಪ್ರಿಯ ಸಂಕಷ್ಟ ಚತುರ್ಥಿ:
ಇದು ಫಾಲ್ಗುಣ ಮಾಸದ ಸಂಕಷ್ಟಿ ಚತುರ್ಥಿ ಆಗಿರುತ್ತದೆ, ಈ ದಿನ ಗಣಪತಿಯ ವಿಶೇಷ ಪೂಜೆ ಮಾಡಲಾಗುತ್ತದೆ. ಇದರಿಂದ ಸಂತೋಷ, ಸಮೃದ್ಧಿ ನೆಲೆಸುತ್ತದೆ ಮತ್ತು ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ ಎಂದು ನಂಬಿಕೆಯಿದೆ.

12 ಫೆಬ್ರವರಿ 2023 ಭಾನುವಾರ ಯಶೋದಾ ಜಯಂತಿ:
ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಯಶೋದೆಯನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಬರುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

13 ಫೆಬ್ರವರಿ 2023 ಸೋಮವಾರ: ಕುಂಭ ಸಂಕ್ರಾಂತಿ, ಶಬರಿ ಜಯಂತಿ, ಕಾಲಷ್ಟಮಿ:
ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ, ಫೆಬ್ರವರಿಯಲ್ಲಿ ಸೂರ್ಯ ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನದಂದು ಶಿವನನ್ನು ಕಾಲಭೈರವನ ಉಗ್ರ ರೂಪದಲ್ಲಿ ಪೂಜಿಸಲಾಗುತ್ತದೆ, ಅವನನ್ನು ಪೂಜಿಸುವುದರಿಂದ ಶತ್ರುಗಳ ಮೇಲೆ ವಿಜಯ ತಂದು ಕೊಡುತ್ತದೆ.

17 ಫೆಬ್ರವರಿ 2023 ಶುಕ್ರವಾರ ವಿಜಯ ಏಕಾದಶಿ:
ಈ ಮಹಾನ್ ಪುಣ್ಯ ವ್ರತವನ್ನು ಆಚರಿಸುವುದರಿಂದ, ಒಬ್ಬ ವ್ಯಕ್ತಿಯು ವಾಜಪೇಯಿ ಯಾಗದ ಫಲವನ್ನು ಪಡೆಯುತ್ತಾನೆ. ವಿಜಯ ಏಕಾದಶಿ ತನ್ನ ಹೆಸರಿನ ಪ್ರಕಾರ ಶತ್ರುಗಳ ವಿರುದ್ಧ ವಿಜಯವನ್ನು ನೀಡುತ್ತದೆ.

18 ಫೆಬ್ರವರಿ 2023 ಶನಿವಾರ ಮಹಾಶಿವರಾತ್ರಿ, ಮಾಸಿಕ ಶಿವರಾತ್ರಿ, ಪ್ರದೋಷ ವ್ರತ, ಶನಿ ತ್ರಯೋದಶಿ:
ಮಹಾಶಿವರಾತ್ರಿ ಹಬ್ಬವು ಶಿವ ಮತ್ತು ಶಕ್ತಿಯ ಭೇಟಿಯ ದಿನವಾಗಿದೆ. ಪುರಾಣಗಳ ಪ್ರಕಾರ, ಈ ದಿನ ತಾಯಿ ಪಾರ್ವತಿ ಮತ್ತು ಭಗವಾನ್ ಶಿವನ ವಿವಾಹವು ನಡೆದಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜೊತೆಗೆ ಈ ದಿನ 12 ಜ್ಯೋತಿರ್ಲಿಂಗಗಳು ಕಾಣಿಸಿಕೊಂಡಿವೆ ಎಂಬ ನಂಬಿಕೆ ಕೂಡ ಇದೆ.

20 ಫೆಬ್ರವರಿ 2023 ಸೋಮವಾರ ಸೋಮಾವತಿ ಅಮವಾಸ್ಯೆ:
ಸೋಮವಾರದಂದು ಅಮವಾಸ್ಯೆಯ ತಿಥಿ ಬರುವ ದಿನವನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ಅಶ್ವತ್ಥಮರವನ್ನು ಪೂಜಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಸೋಮಾವತಿ ಮತ್ತು ಶನಿ ಅಮಾವಾಸ್ಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

21 ಫೆಬ್ರವರಿ ಮಂಗಳವಾರ ರಾಮಕೃಷ್ಣ ಜಯಂತಿ:
ಈ ದಿನವನ್ನು ರಾಮಕೃಷ್ಣ ಪರಮಹಂಸರ ಜಯಂತಿಯ ದಿನವನ್ನಾಗಿ ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ.

23 ಫೆಬ್ರವರಿ 2023 ಗುರುವಾರ ವಿನಾಯಕ ಚತುರ್ಥಿ

25 ಫೆಬ್ರವರಿ ಶನಿವಾರ ಸ್ಕಂದ ಷಷ್ಠಿ

27 ಫೆಬ್ರವರಿ 2023 ಸೋಮವಾರ ಹೋಲಾಷ್ಟಕ ಪ್ರಾರಂಭ, ಮಾಸಿಕ ದುರ್ಗಾಷ್ಟಮಿ, ರೋಹಿಣಿ ಉಪವಾಸ:
ಹೋಳಿಗೆ ಎಂಟು ದಿನಗಳ ಮೊದಲು ಹೋಲಾಷ್ಟಕ ನಡೆಯುತ್ತದೆ. ಈ ಬಾರಿ ಹೋಳಿ ಮಾರ್ಚ್ 7, 2023 ರಂದು ನಡೆಯಲಿದ್ದು, ಈ ಹೋಲಾಷ್ಟಕ್ ಮಾರ್ಚ್ 6 ರವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries