HEALTH TIPS

ಮೈಗ್ರೇನ್‌ ಸಮಸ್ಯೆಯಿದ್ದರೆ ಕೂದಲಿಗೆ ಈ ರೀತಿಯೆಲ್ಲಾ ಮಾಡಲೇಬೇಡಿ

 ಮೈಗ್ರೇನ್ ಸಮಸ್ಯೆ ಇದೆಯೇ ಹಾಗಾದರೆ ಹೇರ್‌ ಕೇರ್‌ ವಿಷಯದಲ್ಲಿ ತುಂಬಾ ಜಾಗ್ರತೆವಹಿಸಬೇಕು, ಕೂದಲಿನ ಅಂದಕ್ಕಾಗಿ ಸ್ಪಾ ಅಥವಾ ಸಲೂನ್‌ಗಳಲ್ಲಿ ಹೇರ್‌ ಕೇರ್‌ ಮಾಡಿಸಿ ಹಣ ಕೊಟ್ಟು ತಲೆನೋವು ಹೆಚ್ಚು ಮಾಡಬಾರದಲ್ಲ, ಹಾಗಾಗಿ ಕೂದಲಿನ ಆರೈಕೆ ಕಡೆ ತುಂಬಾನೇ ಗಮನಹರಿಸಬೇಕು.

ಮೈಗ್ರೇನ್

ಮೈಗ್ರೇನ್‌ಸಮಸ್ಯೆ ಇರುವವರಿಗೆ ಮಾತ್ರ ಆ ಭಯಾನಕ ತಲೆನೋವಿನ ಅನುಭವವಿರುತ್ತದೆ. ಮೈಗ್ರೇನ್‌ ಬಂದರೆ ಎದ್ದು ಕೂರಲು ಕೂಡ ಸಾಧ್ಯವಾಗಲ್ಲ, ತಲೇ ಸಿಡಿದೇ ಹೋಗುವಷ್ಟು ನೋವು ಉಂಟಾಗುತ್ತದೆ. ಆದ್ದರಿಂದ ಮೈಗ್ರೇನ್‌ ಇರುವರು ಮೈಗ್ರೇನ್‌ ಹೆಚ್ಚಾಗದಂತೆ ತುಂಬಾ ಗಮನ ಹರಿಸಬೇಕು. ಕೆಲವೊಂದು ಆಹಾರಗಳು ಮೈಗ್ರೇನ್‌ ಸಮಸ್ಯೆ ಹೆಚ್ಚಿಸುತ್ತದೆ, ಅದರ ಜೊತೆಗೆ ಬ್ಯೂಟಿ ರುಟೀನ್‌ ಕೂಡ ಮೈಗ್ರೇನ್‌ ತಲೆನೋವು ಹೆಚ್ಚು ಮಾಡುತ್ತದೆ.

ಆದ್ದರಿಂದ ಮೈಗ್ರೇನ್‌ ಸಮಸ್ಯೆ ಇರುವವರು ಕೂದಲಿನ ಟ್ರೀಟ್ಮೆಂಟ್‌ ಅಥವಾ ಆರೈಕೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ಎಂದು ನೋಡೋಣ ಬನ್ನಿ:

ಕೂದಲಿನ ಆರೈಕೆ ಮಾಡುವಾಗ ಎಚ್ಚರವಹಿಸಿ

ಸಲೂನ್‌ನಲ್ಲಿ ಕೂದಲಿನ ಆರೈಕೆ ಮಾಡುವಾಗ ಸಲೂನ್‌ಗಳಲ್ಲಿ ಬಳಸುವ ಹೇರ್‌ ಕೇರ್‌ ಪ್ರಾಡೆಕ್ಟ್‌ಗಳಲ್ಲಿ ಫಾರ್ಮಲ್‌ಡೀಹೈಡ್ ರಾಸಾಯನಿಕವಿರುತ್ತದೆ, ಸಾಮಾನ್ಯವಾಗಿ ಎಲ್ಲಾ ಬಗೆಯ ಕೂದಲಿನ ಆರೈಕೆ ವಸ್ತುಗಳಲ್ಲಿ ಈ ರಾಸಾಯನಿಕವಿರುತ್ತದೆ. ಈ ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಎಂದು ಅಧ್ಯಯನಗಳು ಹೇಳಿವೆ. ರಾಸಾಯನಿಕ ಇರುವ ವಸ್ತುಗಳನ್ನು ಕೂದಲಿನ ಆರೈಕೆಗೆ ಬಳಸುವುದರಿಂದ ಮೈಗ್ರೇನ್ ಸಮಸ್ಯೆ ಹೆಚ್ಚಾಗುವುದು.

ರಾಸಾಯನಿಕಗಳಿರುವ ಹೇರ್ ಕೇರ್‌ ಪ್ರಾಡೆಕ್ಟ್‌ ಬಳಸಿದಾಗ ಕೆಲವರಿಗೆ ಈ ಅಡ್ಡಪರಿಣಾಮಗಳು ಉಂಟಾಗುವುದು

* ಕಣ್ಣಿನಲ್ಲಿ ತುರಿಕೆ
* ತಲೆನೋವು
* ತಲೆಸುತ್ತುವುದು
* ಗಂಟಲು ಕೆರೆತ
* ಕೆಮ್ಮು
* ಅಸ್ತಮಾ
* ವಾಂತಿ
* ಎದೆ ನೋವು
* ಮುಖದ ಮೇಲೆ ಗುಳ್ಳೆಗಳು ಏಳುವುದು
* ಮುಖ ಊದಿಕೊಳ್ಳುವುದು
ಕೆಲವರಿಗೆ ಈ ರೀತಿ ಕೂದಲಿಗೆ ಬಣ್ಣ ಹಚ್ಚಿದಾಗ ಅಥವಾ ಕೆರಾಟಿನ್‌ ಚಿಕಿತ್ಸೆ ಮಾಡಿದಾಗ ಈ ರೀತಿ ಉಂಟಾಗುವುದು.

ಇನ್ನು ಮೈಗ್ರೇನ್‌ ಸಮಸ್ಯೆ ಇರುವವರು ಕೂದಲಿನ ಆರೈಕೆ ಮಾಡಿದಾಗ ಉಂಟಾಗುವ ತೊಂದರೆಗಳು

ಹೇರ್‌ ಟ್ರಾನ್ಸ್‌ಪ್ಲ್ಯಾಂಟ್‌ ಮಾಡಿಸಿದಾಗ ಆ ಭಾಗದಲ್ಲಿ ಊತ, ತಲೆನೋವಿನ ಅಡ್ಡ ಒರಿಣಾಮ ಉಂಟಾಗುವುದು. ನಿಮ್ಮ ಇಮ್ಯೂನೆಸಿಸ್ಟಮ್‌ ಕೂದಲಿನ ಕಿರುಚೀಲಗಳು( hair follicles) ಮೇಲೆ ದಾಳಿ ಮಾಡಿದಾಗ ತಲೆನೋವು ಉಂಟಾಗುವುದು. ಸರ್ಜರಿ ಬಳಿಕ ತುಂಬಾ ಜನರಿಗೆ ವಿಪರೀತ ತಲೆನೋವು ಕಂಡು ಬರುವುದು, ಆದರೆ ಭಯಪಡಬೇಕಾಗಿಲ್ಲ, ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ, ಈ ಬಗೆಯ ತಲೆನೋವು ಒಂದೆರಡು ದಿನದಲ್ಲಿ ಕಡಿಮೆಯಾಗುವುದು. ಅಲ್ಲದೆ ಸರ್ಜರಿ ಮಾಡಿಸಿದಾಗ ವೈದ್ಯರು ನಿಮಗೆ ತಲೆನೋವು ಕಡಿಮೆಯಾಗಲು ಔಷಧ ಕೊಡುತ್ತಾರೆ.

ಆದರೆ ಆಗಾಗ ತಲೆನೋವು ಉಂಟಾಗುತ್ತಿದ್ದರೆ ನೀವು ಕೂಡಲೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಹೆಚ್ಚಿನವರು ತಲೆನೋವು ಬಂದಾಗ ವೈದ್ಯರ ಬಳಿ ಹೋಗದೆ ನೋವು ನಿವಾರಕಗಳನ್ನು ಸೇವಿಸುತ್ತಾರೆ, ಹಾಗೇ ಮಾಡಬೇಡಿ, ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ನೀವು ಔಷಧ ಸೇವಿಸಬೇಕು.

ಹೇರ್‌ ಟ್ರಾನ್ಸ್‌ಪ್ಲ್ಯಾಂಟ್‌ ಮಾಡಿದಾಗ ದೇಹ ಸಂಪೂರ್ಣ ಸುಧಾರಿಸಿಕೊಳ್ಳಲು ಒಂದು ವರ್ಷ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಹೇರ್‌ ಟ್ರಾನ್ಸ್‌ಪ್ಲ್ಯಾಂಟ್ ಬಳಿಕ ತುಂಬಾ ತಾಳ್ಮೆಯಿಂದ ಕಾಯಬೇಕು.

ಮೈಗ್ರೇನ್ ಸಮಸ್ಯೆ ಇರುವವರು ಈ ಬಗೆಯ ಹೇರ್‌ ಟ್ರೇಟ್ಮೆಂಟ್‌ ಮಾಡದಿರುವುದೇ ಒಳ್ಳೆಯದು ಮೈಗ್ರೇನ್ ಸಮಸ್ಯೆ ಇದ್ದರೆ ಈ ಬಗೆಯ ಕೂದಲಿನ ಆರೈಕೆ ಮಾಡದಿರುವುದೇ ಒಳ್ಳೆಯದು * ಕೆರಾಟಿನ್ * ಸಿಸ್ಟೈನ್ * ಹೇರ್ ಸ್ಟ್ರೈಟ್ನಿಂಗ್ * ಹೇರ್ ಸ್ಮೂಥ್ನಿಂಗ್ * ರೀಬಾಂಡಿಂಗ್ * ಹೇರ್ ಬೋಟೆಕ್ಸ್ * ಹೇರ್ ಎಕ್ಸ್‌ಟೆನ್ಷನ್ * ಹೇರ್‌ PRP * ಹೇರ್ ಟ್ರಾನ್ಸ್‌ಪ್ಲ್ಯಾಂಟ್ * ಹೇರ್‌ ವೇವಿಂಗ್‌ ಮೈಗ್ರೇನ್ ಸಮಸ್ಯೆಯಿದ್ದರೆ ಹೇರ್ ಕಲರಿಂಗ್ ಕೂಡ ಮಾಡಿಸಬೇಡಿ. ನಿಮ್ಮ ಕೂದಲನ್ನು ನೈಸರ್ಗಿಕಾಗಿ ಆರೈಕೆ ಮಾಡಿ, ಇಲ್ಲದಿದ್ದರೆ ಆಕರ್ಷಕವಾಗಿ ಕಾಣಲು ಕೂದಲಿನ ಅಲಂಕಾರ ಅಥವಾ ಆರೈಕೆ ಮಾಡಿದರೂ ವಿಪರೀತ ತಲೆನೋವಿನಿಂದಾಗಿ ಮುಖದ ಕಳೆ ಕಡಿಮೆಯಾಗುವುದು. ಆದ್ದರಿಂದ ಮೈಗ್ರೇನ್ ಸಮಸ್ಯೆಯಿದ್ದರೆ ಕೂದಲಿನ ಆರೈಕೆ ಮಾಡಲು ಹೋಗಬೇಡಿ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries