HEALTH TIPS

ಗುಜರಾತ್‌: 2023ರ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

 

                ಅಹಮದಾಬಾದ್‌: 2023ನೇ ಸಾಲಿನ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ'ಕ್ಕೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಭಾನುವಾರ ಚಾಲನೆ ನೀಡಿದರು.

                   ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಿಂದ ಗಾಳಿಪಟ ಉದ್ಯಮಕ್ಕೆ ರಾಜ್ಯದಲ್ಲಿ ಉತ್ತೇಜನ ದೊರಕಿದೆ.

ಸುಮಾರು ಎರಡು ದಶಕಗಳ ಹಿಂದೆ ಇದ್ದ ₹ 8-10 ಕೋಟಿ ಉದ್ಯಮ ಇಂದು ₹ 625 ಕೋಟಿಗೆ ಬೆಳೆದು 1.30 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದು ಅವರು ಹೇಳಿದರು.

                ಜಿ-20ಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎನ್ನುವ ಧ್ಯೇಯವಾಕ್ಯದಡಿ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್‌ ಸೇರಿದಂತೆ 68 ದೇಶದ 125 ಜನ ಭಾಗವಹಿಸಿದ್ದಾರೆ. ವಿಶೇಷವೆಂದರೆ ದೇಶದ14 ವಿವಿಧ ರಾಜ್ಯಗಳ 65 ಜನ ಮತ್ತು ಗುಜರಾತ್‌ನ ವಿವಿಧ ಜಿಲ್ಲೆಗಳ 660 ಮಂದಿ ಗಾಳಿಪಟ ಹಾರಿಸಲು ಪಾಲ್ಗೊಂಡಿದ್ದಾರೆ. ಈ ಉತ್ಸವ ಜ.14ರಂದು ಮುಕ್ತಾಯಗೊಳ್ಳಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries