ಕಾಸರಗೋಡು: ವೈದ್ಯಕೀಯ ಶಿಬಿರಕ್ಕಾಗಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಿಂದ 20427 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅರ್ಜಿಗಳ ಪರಿಶೀಲನೆಗೆ ಒ.ಪಿ. ಪರೀಕ್ಷೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆಗೂ ಸೂಚಿಸಲಾಗಿದೆ. ಶಿಬಿರಕ್ಕೆ ತಜ್ಞ ವೈದ್ಯರ ಸೇವೆಯನ್ನು ಬಳಸಿಕೊಳ್ಳಬೇಕು. ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳು ನಡೆಯಲಿವೆ ಎಂದು ಎಂಡೋ ಅವಲೋಕನಾ ಸಭೆಯಲ್ಲಿ ಸಚಿವ ಮಹಮ್ಮದ್ ರಇಯಾಸ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನನ್ವಯ 5234 ಸಂತ್ರಸ್ತರಿಗೆ 206.30 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದು ಸಹಾಯಕ ಜಿಲ್ಲಾಧಿಕಾರಿ ಎಸ್. ಶಶಿಧರನ್ ತಿಳಿಸಿದರು. 92 ಮಂದಿಗೆ ಆರ್ಥಿಕ ನೆರವು ನೀಡಲು ಬಾಕಿಯಿದ್ದು, ಈ ಪೈಕಿ 40 ಮಂದಿಯನ್ನು ಪತ್ತೆಹಚ್ಚಲು ಸಾಧ್ಯವಗಿಲ್ಲ. 52 ಮಂದಿ ಹಕ್ಕು ತರ್ಕದನ್ವಯ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಒಟ್ಟು 14 ಜನರ ಕೋರಿಕೆಯ ಮೇರೆಗೆ ಇವರನ್ನು ಎಂಡೋಸಂತ್ರಸ್ತರ ಪಟ್ಟಿಯಿಂದ ಕೈಬಿಡಲಾಗಿದೆ. ಇದುವರೆಗೆ 127 ಮಂದಿಯನ್ನು ಸಂತ್ರಸ್ತರ ಪಟ್ಟಿಯಿಂದ ಕೈಬಿಡಲಾಗಿದ್ದು, ಇವರಲ್ಲಿ 42 ಮಂದಿ ಅನರ್ಹರೂ ಒಳಗೊಂಡಿದ್ದರು. ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಜಿಲ್ಲೆಯಿಂದ 20427 ಅರ್ಜಿಗಳ ಸೇರ್ಪಡೆ
0
ಜನವರಿ 09, 2023
Tags




