ಕಾಸರಗೋಡು: ಎಡನೀರು ಮಠದಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಪುಣ್ಯ ಸ್ಮರಣಾರ್ಥ ಯಕ್ಷೋತ್ಸವ ಕಾರ್ಯಕ್ರಮ ಜ. 10ಮತ್ತು 11ರಂದು ಜರುಗಲಿದೆ. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.
10ರಂದು ಸಂಜೆ 5.30ಕ್ಕೆ ಹನುಮಗಿರಿ ಮೇಳದವರಿಂದ ಶ್ರೀಕೃಷ್ಣ ತುಲಾಭಾರ-ಮೈರಾವಣ ಕಾಳಗ, ವಿರೋಚನ ಕಾಳಗ ಪ್ರದರ್ಶನಗೊಳ್ಳಳಿದೆ. 11ರಂದು ರಾತ್ರಿ 8.30ರಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದರಿಗೆ ಅಭಿನಂದನೆ ನಡೆಯುವುದು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು. ಹಿರಿಯ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಷಿ, ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ತೆಂಕು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು.
ಇಂದಿನಿಂದ ಎಡನೀರಿನಲ್ಲಿ ಶ್ರೀಕೇಶವಾನಂದ ಭಾರತೀ ಪುಣ್ಯಸ್ಮರಣೆ, ಎಡನೀರು ಯಕ್ಷೋತ್ಸವ
0
ಜನವರಿ 09, 2023
Tags




