ಕಾಸರಗೋಡು: ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಆಟೋರಿಕ್ಷಾದಲ್ಲಿ ಶಾಲೆಗೆ ತೆರಳುತ್ತಿದ್ದ ಹತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಚೆಮ್ನಾಡ್ ಸನಿಹದ ಚೆಂಬರಿಕ ರೇಶನ್ ಅಂಗಡಿ ಬಳಿ ಆಟೋದಲ್ಲಿ ಸಂಚರಿಸುತ್ತಿದ್ದಾಗ ಕಣಜದ ಹುಳು ಏಕಾಏಕಿ ದಾಳಿ ನಡೆಸಿದೆ. ಚೆಮ್ನಾಡ್ ವೆಸ್ಟ್ ಜಿಎಲ್‍ಪಿ ಶಾಲೆ ಮಕ್ಕಳಾದ ಅದಾನ್ ಅಬು, ಮಹಮ್ಮದ್ ರಿನಾದ್, ಜೈನಬಾ, ಫಾತಿಮತ್ ಸುಹರಾ, ಅಹಮ್ಮದ್ ಸಾಬಿರ್, ಮಹಮ್ಮದ್ ನಿಜಾದ್, ಅಹಮ್ಮದ್ ಜುಬೀರ್, ಆಯಿಷತ್ ನವೀರಾ, ಅಹಮ್ಮದ್, ಮಹಮ್ಮದ್ ರಾಹಿಲ್, ರಿಕ್ಷಾ ಚಾಲಕರಾದ ಹಾರಿಸ್ ಹಾಗೂ ಹಕೀಂ ಎಂಬವರೂ ಗಾಯಗೊಂಡಿದ್ದಾರೆ. ಗಾಯಾಳುಗಳೀಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಕಣಜದ ಹುಳು ದಾಳಿ: ವಿದ್ಯಾರ್ಥಿಗಳು, ಚಾಲಕರಿಗೆ ಗಾಯ
0
ಜನವರಿ 09, 2023
Tags




