ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ 43ನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ನೂತನ ಕಟ್ಟಡ ಶ್ರೀಧರ್ಮಶಾಸ್ತಾ ಭೋಜನಶಾಲೆಯನ್ನು ಉದ್ಘಾಟಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಶ್ರೀದರ್ಮಶಾಸ್ತಾ ಸೇವಾಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದಭರ್Àದಲ್ಲಿ ವಾಸ್ತುಶಿಲ್ಪಿ ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ, ಕೃಷ್ಣ ನಾಯ್ಕ ಮಲ್ಲಡ್ಕ ಹಾಗೂ ಬಾಲಕೃಷ್ಣ ನಾಯ್ಕ ನೀರ್ಚಾಲು ಇವರನ್ನು ಗೌರವಿಸಲಾಯಿತು. ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ, ಸೇವಾಸಮಿತಿಯ ಅಧ್ಯಕ್ಷ ಉದಯಕುಮಾರ್ ಮೈಕುರಿ, ಗುರುಸ್ವಾಮಿ ರಮೇಶ ಆಚಾರ್ಯ, ಧರ್ಮಶಾಸ್ತಾ ಮಿತ್ರಮಂಡಳಿಯ ಅಧ್ಯಕ್ಷ ಜನಾದರ್Àನ ನಾಯ್ಕ, ಮಾತೃಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮೀ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣ ನಾಯ್ಕ ಮಲ್ಲಡ್ಕ ಸ್ವಾಗತಿಸಿ, ಉಪಾಧ್ಯಕ್ಷ ಸುಧಾಮ ಮಾಸ್ತರ್ ಮಲ್ಲಡ್ಕ ವಂದಿಸಿದರು. ಉಪಾಧ್ಯಕ್ಷ ಮಂಜುನಾಥ ಮಾನ್ಯ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ವಿವಿಧ ಭಜನಾ ಸಂಘಗಳಿಂದ ಭಜನೆ, ಸಂಜೆ ತಾಯಂಬಕ, ಕುಣಿತ ಭಜನೆ, ನೀರ್ಚಾಲು ಕುಮಾರ ಸ್ವಾಮಿ ಭಜನಾ ಮಂದಿರದಿಂದ ಹುಲ್ಪೆ ಮೆರವಣಿಗೆ ನಡೆಯಿತು. ಚೆಂಡೆಮೇಳ, ಹುಲಿವೇಷ, ನಾಸಿಕ್ ಬ್ಯಾಂಡ್, ಮುತ್ತುಕೊಡೆಗಳೊಂದಿಗೆ ಸುಡುಮದ್ದು ಪ್ರದರ್ಶನ ಗಮನಸೆಳೆಯಿತು. ರಾತ್ರಿ ಬದಿಯಡ್ಕ ಶಾರದಾಂಬಾ ಯಕ್ಷಗಾನ ಸಂಘದ ವತಿಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.




.jpg)
.jpg)
