HEALTH TIPS

ಶಬರಿಮಲೆಯಲ್ಲಿ ಮುಂದುವರಿದ ಭಕ್ತಾದಿಗಳ ದಟ್ಟಣೆ-20ರಂದು ಗರ್ಭಗುಡಿಬಾಗಿಲು ಮುಚ್ಚುಗಡೆ




        ಪತ್ತನಂತಿಟ್ಟ: ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನದ ನಂತರವೂ ಭಕ್ತಾದಿಗಳ ದಟ್ಟಣೆ ಮುಂದುವರಿದಿದೆ. ಮಕರಸಂಕ್ರಮಣ ಧಾರ್ಮಿಕ ವಿಧಿ ವಿಧಾನಗಳು ಜ. 20ರಂದು ಬೆಳಗ್ಗೆ ಪೂರ್ಣಗೊಂಡು ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಈ ವರ್ಷದ ಮಕರಸಂಕ್ರಮಣ ಪೂಜೆ ಮುಕ್ತಾಯಗೊಳ್ಳಲಿದ್ದು, ನಂತರ ಭಕ್ತಾದಿಗಳಿಗೆ ಪ್ರವೇಶಾವಕಾಶ ನೀಡಲಾಗುವುದಿಲ್ಲ.
          ಜ. 18ರ ರಾತ್ರಿ ತುಪ್ಪಾಭಿಷೇಕಕೊನೆಗೊಂಡಿದ್ದು, ರಾತ್ರಿ ಪೂಜೆಯ ನಂತರ ಶ್ರೀ ಅಯ್ಯಪ್ಪ ವಿಗ್ರಹದ ಮೆರವಣಿಗೆ ಮಾಳಿಗಪುರ ಮಣಿಮಂಟಪದಿಂದ ತೊಡಗಿ ಶರಂಗುತ್ತಿವರೆಗೆ ನಡೆಯಿತು. ಜ. 19ರಂದು ರಾತ್ರಿ ಪೂಜೆಯ ನಂತರ  ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಜ. 20ರಂದು ಬೆಳಗ್ಗೆ 5.30ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ವಿವಿಧ ವೈದಿಕ ಕಾರ್ಯಕ್ರಮಗಳ ನಂತರ ಬೆಳಗ್ಗೆ 6ಕ್ಕೆ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಈ ವರ್ಷದ ಮಕರಸಂಕ್ರಮಣ ಪೂಜೆ ಸಂಪನ್ನಗೊಳ್ಳಲಿದೆ. ನಂತರ ಕುಂಭ ಮಾಸಿಕ ಪೂಜೆಗಾಗಿ ಫೆ. 12ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು.




 


 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries