HEALTH TIPS

ಆದಾಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಶಬರಿಮಲೆ


               ಪತ್ತನಂತಿಟ್ಟ: ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಿ ದೇಶಾದ್ಯಂತ ಅಸಂಖ್ಯ ಭಕ್ತರು ನಂಬಿಕೊಂಡಿರುವ ಕ್ಷೇತ್ರ. ಮಕರ ಬೆಳಕು ಉತ್ಸವದ ಬಳಿಕದ ಶ್ರೀಸನ್ನಿಧಿಯ ಆದಾಯದ ಅಂಕಿಅಂಶಗಳು ಇದೀಗ ಹೊರಬಿದ್ದಿದೆ. ಈ ಬಾರಿ ಐತಿಹಾಸಿಕ ಭಾರಿ ಏರಿಕೆಯಾಗಿದೆ ಎಮದು ತಿಳಿದುಬಂದಿದೆ.
            ಈ ಬಾರಿ ಅಯ್ಯಪ್ಪನಿಗೆ ಅರ್ಪಿಸಿದ ಹರಕೆ ರೂಪದ ಕಾಣಿಕೆ ಮೊತ್ತದಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಎರಡು ವರ್ಷಗಳ ಕೋವಿಡ್ ಸೋಂಕಿನ ಕಾರಣ ಹೇರಲಾಗಿದ್ದ ನಿಯಂತ್ರಣದ ಬಳಿಕ, ಈ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ.
        ಕಾಣಿಕೆಯಾಗಿ ಸಮರ್ಪಿಸಿದ ನಾಣ್ಯಗಳನ್ನು ಹುಂಡಿಯಿಂದ ಹೊರತೆಗೆದು ಕಟ್ಟಡದ 3 ಭಾಗಗಳಲ್ಲಿ ಜೋಡಿಸಲಾಗುತ್ತದೆ. ಜನವರಿ 12ರವರೆಗಿನ ಅಂಕಿ ಅಂಶಗಳ ಪ್ರಕಾರ ಸನ್ನಿಧಿಯಲ್ಲಿ 310.40 ಕೋಟಿ ರೂ.ಕಾಣಿಕೆ ಸಮರ್ಪಣೆಯಾಗಿದೆ. ಜನವರಿ 12ರವರೆಗಿನ ಅಂಕಿ ಅಂಶಗಳ ಪ್ರಕಾರ ಒಟ್ಟು 310,40,97,309 ಕೋಟಿ ರೂ.ಗಳಲ್ಲಿ 231,55,32,006 ಕ್ಷೇತ್ರದ ಆದಾಯವಾಗಿದೆ. ಹಾಗೂ ಮಕರ ಬೆಳಕು ಸಂದರ್ಭದಲ್ಲಿ  78,85,65,303 ರೂ.ಕಾಣಿಕೆ ಸಮರ್ಪಣೆಯಾಗಿದೆ. ಈ ಬಾರಿಯ ಅರವಣ ಮಾರಾಟದಲ್ಲೂ ಇತಿಹಾಸ ಸೃಷ್ಟಿಯಾಗಿದೆ. ಮಂಡಲ ಅವಧಿಯಲ್ಲಿ 107,85,15,970 ಕೋಟಿ ಹಾಗೂ ಮಕರ ಬೆಳಕು ಅವಧಿಯಲ್ಲಿ 32,93,74,900 ಕೋಟಿ ರೂ.ಗಳನ್ನು ಅರವಣದ ಮೂಲಕ ಗಳಿಸಲಾಗಿದೆ.
           ಜನವರಿ 13, 14, 15ರಂದು ಅಯ್ಯಪ್ಪನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬುಧವಾರದ ವರೆಗೆ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ 315.46 ಕೋಟಿ ರೂ.ಗೆ ಏರಿಕೆಯಾಗಿದೆ. ಶಬರಿಮಲೆ ಈ ಬಾರಿ ತನ್ನ ಇತಿಹಾಸದಲ್ಲಿಯೇ ಅತಿ ಹೆಚ್ಚು ಆದಾಯ ದಾಖಲಿಸಿದೆ. ಧನಲಕ್ಷ್ಮಿ ಬ್ಯಾಂಕ್ ನೋಟು ಎಣಿಕೆಗೆ 6 ಸಣ್ಣ ಯಂತ್ರಗಳು ಮತ್ತು ಒಂದು ದೊಡ್ಡ ಯಂತ್ರವನ್ನು ಒದಗಿಸಿದೆ. ಆದರೆ ಎಣಿಕೆ ಪೂರ್ಣಗೊಂಡಿಲ್ಲ. ಎಣಿಸಲು ಎರುಮೇಲಿ, ನಿಲಯ್ಕಲ್ ಮತ್ತು ಪಂಬಾದಿಂದ 60 ನೌಕರರನ್ನು ಹೊಸದಾಗಿ ನೇಮಿಸಲಾಗಿದೆ.

           ಇದೇ ವೇಳೆ ನಾಣ್ಯಗಳನ್ನು ಎಣಿಕೆ ಮಾಡಬೇಕೋ ಅಥವಾ ತೂಕ ಮಾಡಬೇಕೋ ಎಂಬ ಗೊಂದಲದಲ್ಲಿ ದೇವಸ್ವಂ ಅಧಿಕಾರಿಗಳು ಇದ್ದಾರೆ. 2019 ರ ವಿಜಿಲೆನ್ಸ್ ವರದಿಯು ಒಂದೇ ಮುಖ ಬೆಲೆಯ ನಾಣ್ಯಗಳನ್ನು ತೂಕ ಮಾಡುವಂತಿಲ್ಲ. ಕಾರಣ, ಅವು ವಿಭಿನ್ನ ಆಕಾರಗಳು ಮತ್ತು ತೂಕವನ್ನು ಹೊಂದಿರುತ್ತದೆ ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅನುಮತಿ ಕೋರಿ ದೇವಸ್ವಂ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಎಣಿಕೆಯ ವರದಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಶಬರಿಮಲೆ ವಿಶೇಷ ಆಯುಕ್ತರಿಗೆ ಹೈಕೋರ್ಟ್ ಸೂಚಿಸಿತ್ತು. ಎಣಿಕೆಯಲ್ಲಿ ಅವ್ಯವಹಾರ ನಡೆದಿದ್ದರೆ ಪತ್ತೆ ಹಚ್ಚುವಂತೆ ದೇವಸ್ವಂ ವಿಜಿಲೆನ್ಸ್‍ಗೆ ನ್ಯಾಯಾಲಯ ಸೂಚಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries