ಕೋಯಿಕ್ಕೋಡ್ : ಕೇರಳ ರಾಜ್ಯ 61ನೇ ಶಾಲಾ ಕಲೋತ್ಸವದಲ್ಲಿ ಅತಿಥೇಯ ಕೋಯಿಕ್ಕೋಡ್ ಜಿಲ್ಲೆ 945ಅಂಕಗಳೊಂದಿಗೆ ಕಲೋತ್ಸವದ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ತಲಾ 925ಅಂಕ ಗಳಿಸಿದ ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆ ದ್ವಿತೀಯ ಸ್ಥಾನವನ್ನು ಸಮಾನವಾಗಿ ಹಂಚಿಕೊಂಡಿದೆ. ತೃಶ್ಯೂರ್ ಜಿಲ್ಲೆ 915ಅಂಕಗಳೊಂದಿಗೆ ತೃತೀಯ ಸಥಾನ ಗಳಿಸಿದೆ. ಒಟ್ಟು 20ಬಾರಿ ಕೋಯಿಕ್ಕೋಡ್ ಜಿಲ್ಲೆ ರಜ್ಯಮಟ್ಟದ ಕಲೋತ್ಸವದ ಕರೀಟ ಮುಡಿಗೇರಿಸಿದೆ.
ಪ್ರೌಢಶಾಲಾ ವಿಭಾಗದಲ್ಲಿ 446ಅಂಕಗಳೊಂದಿಗೆ ಕೋಯಿಕ್ಕೋಡ್ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. 443ಅಂಕಗಳಿಮದಿಗೆ ಪಾಳಕ್ಕಾಡ್ ದ್ವಿತೀಯ ಹಾಗೂ 436ಅಂಕಗಳೊಂದಿಗೆ ತೃಶ್ಯೂರ್ ತೃತೀಯ ಸಥಾನ ಗಳಿಸಿದೆ. ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ಸಮಾರೋಪ ಸಮಾರಂಭ ಉದ್ಘಾಟಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರವಾಸೋದ್ಯಮ-ಲೋಕೋಪಯೋಗಿ ಖಾತೆ ಸಚಿವ ಮಹಮ್ಮದ್ ರಿಯಾಸ್ ಅಧ್ಯಕ್ಷತೆ ವಹಿಸಿದ್ದರು. ಕಲೋತ್ಸವ ಸ್ಮರಣಸಂಚಿಕೆಯನ್ನು ಸಚಿವ ಆಂಟನಿ ರಾಜು ಬಿಡುಗಡೆಗೊಳಿಸಿದರು.
61ನೇ ರಾಜ್ಯ ಶಾಲಾ ಕಲೋತ್ಸವ ಸಂಪನ್ನ: ಅತಿಥೇಯ ಕೋಯಿಕ್ಕೋಡ್ ಜಿಲ್ಲೆಗೆ ಸಮಗ್ರ ಪ್ರಶಸ್ತಿ
0
ಜನವರಿ 08, 2023
Tags




