HEALTH TIPS

ಮಂಜೇಶ್ವರ ಗಿಳಿವಿಂಡು ಬಹುಭಾಷಾ ಸಮ್ಮೇಳನ ಹಿರಿಮೆ: ಮೂರು ಭಾμÉಗಳಲ್ಲಿ ಅಕ್ಷರ ಬರೆದು ಮೂಡಿತು ಜಿಲ್ಲೆಯ ಗರಿಮೆ


          ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡವಲ್ಲಿ ಶುಕ್ರವಾರ ಆರಂಭಗೊಂಡ ಬಹುಭಾಷಾ ಸಮ್ಮೇಳನ ವೇದಿಕೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ವೇದಿಕೆಯಲ್ಲಿ ಹಾಕಲಾಗಿದ್ದ ಬರವಣಿಗೆ ಫಲಕದಲ್ಲಿ ಮಲಯಾಳಂ, ಕನ್ನಡ, ತುಳು, ಉರ್ದು ಭಾμÉಗಳಲ್ಲಿ ‘ಎ’ ಅಕ್ಷರ ಬರೆಯುವ ಮೂಲಕ ಉದ್ಘಾಟಿಸಲಾಯಿತು. ಉರ್ದುವಿನಲ್ಲಿ ಶಾಸಕ ಎ.ಕೆ.ಎಂ.ಅಶ್ರಫ್, ಮಲಯಾಳಂನಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಸಚ್ಚಿದಾನಂದನ್, ಕನ್ನಡದಲ್ಲಿ ಗೋವಿಂದ ಪೈ ಟ್ರಸ್ಟಿ ಸದಸ್ಯ ಹಾಗೂ ಲೇಖಕ ಡಾ.ಕೆ.ಚಿನ್ನಪ್ಪ ಗೌಡ, ತುಳುವಿನಲ್ಲಿ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಅಕ್ಷರ ಮೂಡಿಸಿ ಗಮನ ಸೆಳೆದರು.



                 ಪುಸ್ತಕಗಳ ಬಿಡುಗಡೆ:
           ಸಮಾರಂಭದಲ್ಲಿ ಕನ್ನಡದ ಹಿರಿಯ ಲೇಖಕ ದಿ.ಡಾ.ಡಿ.ಕೆ.ಚೌಟ ಅವರ ಮಲಯಾಳಂ ಅನುವಾದಿತ ಮಿತ್ತಬೈಲು ಯಮುನಕ್ಕ ಕೃತಿ ಬಿಡುಗಡೆ ಮಾಡಲಾಯಿತು. ಡಾ.ಎ.ಎಂ.ಶ್ರೀಧರನ್ ಅವರು ಮಲಯಾಳಂ ಭಾμÉಗೆ ಅನುವಾದಿಸಿದ್ದಾರೆ. ಗಿಳಿವಿಂಡು ಬಹುಭಾಷಾ ಸಮ್ಮೇಳನದಲ್ಲಿ ಲೇಖಕ ಡಾ.ಚಿನ್ನಪ್ಪ ಗೌಡ ಅವರು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಸಚ್ಚಿದಾನಂದನ್ ಅವರಿಗೆ ಹಸ್ತಾಂತರಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿದರು.


               ಪ್ರದರ್ಶನದಲ್ಲಿ ಭಾಷಾ ಪ್ರದರ್ಶನ:
           ಬಹುಭಾಷೆ ಹಿರಿಮೆ ಬಹುಶಃ ಕಾಸರಗೋಡು ಜಿಲ್ಲೆಗೆ ಮಾತ್ರ ಸಾಮರಸ್ಯದ ಸಂಕೇತವಾಗಿದೆ. ಸಪ್ತ ಭಾಷೆಗಳ ಸಂಗಮ ಭೂಮಿ ಎಂದೇ ಹೇಳಲ್ಪಡುವ ಕಾಸರಗೋಡಲ್ಲಿ ಕೇವಲ ಏಳು ಭಾಷೆಗಳಳಷ್ಟೇ ಅಲ್ಲದೆ ಸುಮಾರು ಇಪ್ಪತ್ತು ಭಾμÉಗಳು, ದೊಡ್ಡ ಮತ್ತು ಚಿಕ್ಕ ಮತ್ತೆರಡು ಭಾಷೆಗಳು ಜಿಲ್ಲೆಯ ಗಡಿ ಗ್ರಾಮಗಳಲ್ಲಿ ತಮ್ಮದೇ ಆದ ಅಸ್ತಿತ್ವದಲ್ಲಿದೆ. ಗಿಳಿವಿಂಡು ಬಹುಭಾಷಾ ಸಮ್ಮೇಳನದಲ್ಲಿ ಹತ್ತು ಭಾμÉಗಳಲ್ಲಿ 100 ಆಯ್ದ ಪದಗಳ ಪ್ರದರ್ಶನವನ್ನು ಸಿದ್ಧಪಡಿಸಲಾಗಿದೆ. ಕನ್ನಡ, ತುಳು, ಉರ್ದು, ಬ್ಯಾರಿ, ಕೊಂಕಣಿ, ಕರ್ಹಾಡ, ಮರಾಠಿ, ಶಿವಳ್ಳಿ ತುಳು, ಹವಿ ಕನ್ನಡ ಮತ್ತು ಮಾಪಿಳ್ಳ ಮಲಯಾಳಂ ಭಾಷೆಗಳಲ್ಲಿ ಅಭಿವ್ಯಕ್ತಿಗಳು ಪ್ರದರ್ಶನದಲ್ಲಿವೆ. ವಿವಿಧ ಭಾಷೆಗಳಲ್ಲಿ ಪದವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಮಲಯಾಳಂನಲ್ಲಿಯೂ ನೀಡಲಾಗಿದೆ. ಮತ್ತು ಪ್ರತಿ ಭಾಷೆಯ ಲಿಪಿ ನೀಡಲಾಗಿದೆ. ಗಿಳಿವಿಂಡು ಬಹುಭಾಷಾ ಸಮ್ಮೇಳನದ ಸಂಘಟಕ ಸಮಿತಿ ಸದಸ್ಯ, ಅಧ್ಯಾಪಕ ಕೆ.ವಿ.ಸಜೀವನ್ ಈ ವಿಶಿಷ್ಟ ಕಲ್ಪನೆಯ ಹಿಂದೆ ಇದ್ದಾರೆ. ಪತ್ರಕರ್ತ ಮತ್ತು ಬರಹಗಾರ ರವೀಂದ್ರನ್ ಪಾಡಿ ಅವರು ಅವರು ವಿವಿಧ ಪ್ರದೇಶಗಳಿಂದ ಪದಗಳನ್ನು ಸಂಗ್ರಹಿಸಿದ್ದಾರೆ. ಕೆ.ವಿ.ಸಜೀವನ್ ಮಾತನಾಡಿ, ಕಾಸರಗೋಡು ಜಿಲ್ಲೆ ಸಪ್ತಭಾμÉಗಳ ಸಂಗಮವಾಗದೆ ಬಹುಭಾμÁ ಸಂಗಮವಾಗಿದ್ದು, ಭಾμÉಯು ಭಾವನೆ ಮೀರಿ ಸಾಂಸ್ಕøತಿಕ ನೆಲೆವೀಡಾಗಿ ಕಾಣಬೇಕು ಎಂದಿರುವರು. ಬಹುಭಾಷಾ ಸಮ್ಮೇಳನ ಕೇಂದ್ರದಲ್ಲಿ ನಡೆದ ಪ್ರದರ್ಶನವನ್ನು ಕೇರಳ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಅಶೋಕನ್ ಚರುವಿಲ್ ಉದ್ಘಾಟಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries