HEALTH TIPS

ಒಂದೇ ಫೋನ್‌ ಎರಡು ವಾಟ್ಸ್‌ಆಯಪ್ ಬಳಸುವುದು ಹೇಗೆ?

 

      ಡ್ಯುಯಲ್ ಅಥವಾ ಅವಳಿ (ಎರಡೆರಡು) ಸಿಮ್ ಕಾರ್ಡ್‌ಗಳನ್ನು ಅಳವಡಿಸುವ ಸ್ಮಾರ್ಟ್‌ಫೋನ್ ಬಂದ ಬಳಿಕ, ಈ ಎರಡೂ ಸಿಮ್ ಕಾರ್ಡ್‌ಗಳ ಪೂರ್ಣ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ತಂತ್ರಜ್ಞಾನದ ತುರ್ತು ಅಭಿವೃದ್ಧಿಯ ಫಲವೆಂದರೆ, ಅವಳಿ ಮೆಸೆಂಜರ್‌ಗಳು, ಅವಳಿ ಫೇಸ್‌ಬುಕ್ ಖಾತೆಗಳು, ಅವಳಿ ವಾಟ್ಸ್‌ಆಯಪ್ ಖಾತೆಗಳನ್ನು ಒಂದೇ ಫೋನ್‌ನಲ್ಲಿ ನಿಭಾಯಿಸುವುದು.

             ಅಧಿಕೃತವಾಗಿ ಎರಡು ಫೇಸ್‌ಬುಕ್ ಖಾತೆಗಳಿಗೆ, ಎರಡು ವಾಟ್ಸ್‌ಆಯಪ್ ಖಾತೆಗಳಿಗೆ ಒಂದೇ ಸ್ಮಾರ್ಟ್‌ಫೋನ್‌ನಿಂದ ಏಕಕಾಲಕ್ಕೆ ಲಾಗಿನ್ ಆಗುವುದು ಸಾಧ್ಯವಿಲ್ಲ. ಒಂದು ಫೋನ್‌ನಲ್ಲಿ, ಒಂದು ಸಂಖ್ಯೆಯ ಮೂಲಕವಷ್ಟೇ ಯಾವುದೇ ಖಾತೆಯನ್ನು ದೃಢೀಕರಿಸಬಹುದಾಗಿದೆ. ಹೀಗಾಗಿ ಈ ತಂತ್ರವನ್ನು ಬಳಸಿದರೆ, ಏಕಕಾಲದಲ್ಲಿ ಎರಡು ಖಾತೆಗಳನ್ನು ಒಂದೇ ಫೋನ್‌ನಲ್ಲಿ ಬಳಸಬಹುದಾಗಿದೆ. ಕೆಲವು ಫೋನ್ ತಯಾರಕರು ಈ ವೈಶಿಷ್ಟ್ಯವನ್ನು ಅಳವಡಿಸಿಯೇ ವಿತರಿಸುತ್ತಿದ್ದರೆ, ಇನ್ನು ಕೆಲವು ಆಯಪ್‌ಗಳನ್ನು ಬಳಸಿ ಎರಡೆರಡು ಖಾತೆಗಳನ್ನು ಒಂದೇ ಫೋನ್‌ನಲ್ಲಿ ನಿಭಾಯಿಸಬಹುದು. ಪ್ರತ್ಯೇಕ ಆಯಪ್ ಬಳಸುವುದು ಅಷ್ಟೇನೂ ಸುರಕ್ಷಿತವಲ್ಲದ ಕಾರಣ ಅದರ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿಲ್ಲ.

               ಅಂತರ್‌ನಿರ್ಮಿತವಾಗಿಯೇ ಬಂದಿರುವ ಡ್ಯುಯಲ್ ಆಯಪ್ ಬಳಕೆಯ ವೈಶಿಷ್ಟ್ಯವು ಹೆಚ್ಚು ಉಪಯೋಗಕ್ಕೆ ಬರುವುದು ವಾಟ್ಸ್‌ಆಯಪ್ ಬಳಕೆಯಲ್ಲಿ. ಒಂದು ಸ್ವಂತ ಅಥವಾ ಖಾಸಗಿ ಸಂಪರ್ಕಗಳಿಗಾಗಿ ಖಾತೆ ಹಾಗೂ ಇನ್ನೊಂದು ಫೋನ್ ನಂಬರ್‌ಗೆ ಲಿಂಕ್ ಆಗಿರುವ ವಾಟ್ಸ್‌ಆಯಪ್ ಖಾತೆಯನ್ನು ಬಿಸಿನೆಸ್ ಅಥವಾ ವ್ಯಾವಹಾರಿಕ ಖಾತೆಯಾಗಿ, ಉತ್ಪನ್ನಗಳು ಇಲ್ಲವೇ ಸೇವೆಗಳ ಪ್ರಚಾರಕ್ಕಾಗಿ ಬಳಸಬಹುದು.

             ಮೂಲತಃ ಒಂದು ಫೋನ್ ನಂಬರ್‌ನಿಂದ ಒಂದು ವಾಟ್ಸ್‌ಆಯಪ್ ಖಾತೆಯನ್ನು ಮಾತ್ರವೇ ನಿಭಾಯಿಸಬಹುದು. ತಯಾರಕರು ನೀಡುವ ವೈಶಿಷ್ಟ್ಯದ ಮೂಲಕ, ಡ್ಯುಯಲ್ (ಎರಡು) ಸಿಮ್ ಕಾರ್ಡ್ ಇರುವವರು ಅವಳಿ ಖಾತೆಗಳನ್ನು ರಚಿಸಲು ಆಂಡ್ರಾಯ್ಡ್ ಫೋನ್‌ಗಳಲ್ಲಿ ಅವಕಾಶವಿದೆ. ಸ್ಯಾಮ್‌ಸಂಗ್, ಒನ್‌ಪ್ಲಸ್, ಒಪ್ಪೊ, ಶಓಮಿ, ಹುವಾವೆ, ವಿವೋ ಹಾಗೂ ರಿಯಲ್‌ಮಿ ಮುಂತಾದ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್-ನಿರ್ಮಿತ ವ್ಯವಸ್ಥೆಯಿದೆ. ಸೆಟ್ಟಿಂಗ್ಸ್ ಆಯಪ್‌ನಲ್ಲಿ 'ಅಡ್ವಾನ್ಸ್‌ಡ್ ಫೀಚರ್ಸ್" ಎಂಬಲ್ಲಿ ಹೋದರೆ, 'ಡ್ಯುಯಲ್ ಮೆಸೆಂಜರ" ಎಂಬ ಆಯ್ಕೆ ಇದೆ. ಅದನ್ನು ತೆರೆದರೆ, ಫೇಸ್‌ಬುಕ್, ವಾಟ್ಸ್‌ಆಯಪ್, ಸ್ನ್ಯಾಪ್‌ಚಾಟ್, ಟೆಲಿಗ್ರಾಂ ಹಾಗೂ ಮೆಸೆಂಜರ್ - ಇವುಗಳನ್ನು ಅವಳಿ ಖಾತೆ ಬಳಸುವಂತೆ ಹೊಂದಿಸುವ ಆಯ್ಕೆ ದೊರೆಯುತ್ತದೆ. ಆಯಾ ಆಯಪ್ ಹೆಸರಿನ ಮುಂದಿರುವ ಸ್ಲೈಡರ್ ಅನ್ನು ಬಲಕ್ಕೆ ಸರಿಸಿದರೆ ಅದರ ಎರಡನೇ ಆಯಪ್ ಕ್ರಿಯೇಟ್ ಆಗುತ್ತದೆ. ಮೇಲಿನದು ಸ್ಯಾಮ್‌ಸಂಗ್ ಫೋನ್‌ನ ಸೆಟ್ಟಿಂಗ್ ಆಗಿದ್ದರೆ, ಬೇರೆ ಕೆಲವು ಕಂಪನಿಗಳ ಫೋನ್‌ಗಳಲ್ಲಿ ಇದಕ್ಕೆ ಕ್ಲೋನ್ ಆಯಪ್, ಡ್ಯುಯಲ್ ಆಯಪ್ಸ್ ಅಥವಾ ಬೇರೆ ಸಂಬಂಧಿತ ಹೆಸರು ಇರಬಹುದು ಎಂಬುದು ಗಮನದಲ್ಲಿರಲಿ.

             ಹೀಗೆ ಕ್ರಿಯೇಟ್ ಆಗುವ ಎರಡನೇ ಆಯಪ್ ಅನ್ನು ಪ್ರಧಾನ ಆಯಪ್‌ನಿಂದ ಪ್ರತ್ಯೇಕವಾಗಿ ಕಾಣುವಂತೆ ಮಾಡಲು ಆಯಪ್ ಐಕಾನ್ ತುದಿಗೊಂದು ಬೇರೆ ಬಣ್ಣದ ಸೂಚಕವಿರುತ್ತದೆ. ಹೀಗೆ ರಚನೆಯಾದ ಎರಡನೇ ಆಯಪ್‌ಗೆ ಎಂದಿನಂತೆಯೇ ಫೋನ್ ನಂಬರ್ ಬಳಸಿ ಅಥವಾ ಫೇಸ್‌ಬುಕ್ ಬಳಕೆದಾರ ಹೆಸರು - ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬಹುದು.

                ಆದರೆ ಗಮನಿಸಬೇಕಾದ ಅಂಶವೆಂದರೆ, ಇದು ಪ್ರತ್ಯೇಕ ಆಯಪ್ ಇನ್‌ಸ್ಟಾಲ್ ಮಾಡುವುದಲ್ಲ. ಬದಲಾಗಿ ಒಂದು ಆಯಪ್‌ನ ಕ್ಲೋನ್ ಅಥವಾ ತದ್ರೂಪಿಯನ್ನು ಸೃಷ್ಟಿಸುವುದು. ನೀವು ಆ ಆಯಪ್ ಅನ್‌ಇನ್‌ಸ್ಟಾಲ್ ಮಾಡಿದರೆ ಎರಡೂ ಖಾತೆಗಳು ಫೋನ್‌ನಿಂದ ಡಿಲೀಟ್ ಆಗುತ್ತವೆ ಎಂಬುದು ನೆನಪಿಡಬೇಕಾದ ವಿಚಾರ.

             ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಟ್ವಿಟರ್ ಮುಂತಾದ ಆಯಪ್‌ಗಳಲ್ಲಿ, ಇನ್ನೊಂದು ಖಾತೆಗೆ ಲಾಗಿನ್ ಆಗುವ ಆಯ್ಕೆ ನೀಡಲಾಗಿದೆ. ಆಯಾ ಖಾತೆಗಳನ್ನು ನೋಡಲು ಪ್ರೊಫೈಲ್ ಬದಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕಾಗುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries