ಮಂಜೇಶ್ವರ: ಧಾರ್ಮಿಕ ಮುಂದಾಳು ಮತ್ತು ಹಿರಿಯ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ಪುರಾತನ ಮಾಗಣೆ ದೇವಸ್ಥಾನ ವರ್ಕಾಡಿ ಶ್ರೀ ಕಾವೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಶ್ರೀ ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ಮಾಹಿತಿ ಪಡಕೊಂಡ ಅವರು ಯೋಜನೆ, ಖರ್ಚುವೆಚ್ಚ ಹಾಗೂ ನಿಧಿ ಸಂಗ್ರಹಣೆ ಬಗ್ಗೆ ಮಾರ್ಗದರ್ಶನ ನೀಡಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಸುಭಾಸ್ ಚಂದ್ರ ಅಡಪ, ಕ್ಷೇತ್ರ ತಂತ್ರಿಗಳಾದ ಸಂತೋಷ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಮಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ರೈ, ಮೊಕ್ತೆಸರರಾದ ಸದಾಶಿವ ನಾಯ್ಕ್, ಕಿಶೋರ್ ಶೆಟ್ಟಿ, ಧಾರ್ಮಿಕ ಮುಖಂಡ, ಕ್ಯಾಂಪ್ಕೋ ನಿದೇಶಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ ಉಪಸ್ಥಿತರಿದ್ದರು.
ಕಾವಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹಿರಿಯ ಉದ್ಯಮಿ ಭೇಟಿ
0
ಜನವರಿ 30, 2023




