ಮಂಜೇಶ್ವರ: ಪಾವೂರು ಬಜಾಲು ಪೊಯ್ಯೆ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪೊಯ್ಯೆ ಶ್ರೀ ಚಾಂಉಂಡೇಶ್ವರೀ ಬಂಟ ಹಾಗೂ ಪರಿವಾರ ದೈವಗಳಿಗೆ ಪುದ್ವಾರ ಮೆಚ್ಚಿ ನೇಮೋತ್ಸವ ಜ. 31ರಂದು ಜರುಗಲಿದೆ.
ಉತ್ಸವದ ಅಂಗವಾಗಿ ನೇಮದ ಚಪ್ಪರ ಏರಿಸುವ ಕಾರ್ಯಕ್ರಮ ಸೋಮವಾರ ನಡೆಯಿತು. 31ರಂದು ಬೆಳಗ್ಗೆ 4ಕ್ಕೆ ಭಂಡಾರ ಏರುವುದು, 9.30ಕ್ಕೆ ಶ್ರೀ ಚಾಮುಂಡೇಶ್ವರೀ ದೈವದ ನೇಮ, ಸಂಜೆ 5ಕ್ಕೆ ಪರಿವಾರ ದೈವಗಳಿಗೆ ನೇಮ, 7ಕ್ಕೆ ಬಂಟ ದೈವದ ನೇಮದ ನಂತರ ರಾತ್ರಿ 8ಕ್ಕೆ ಭಂಡಾರ ಇಳಿಯಲಿರುವುದು. 9ರಿಂದ ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ಗರುಡ ಪಮಚಮಿ ತುಳು ನಾಟಕ ಪ್ರದರ್ಶನಗೊಳ್ಳಳಿರುವುದು.
ಪಾವೂರು ಪೊಯ್ಯೆ: ಪುದ್ವಾರ್ ಮೆಚ್ಚಿ ನೇಮೋತ್ಸವ
0
ಜನವರಿ 30, 2023




