ಮಂಜೇಶ್ವರ: ಅಂತರ್ ರಾಜ್ಯ ಸಂಪರ್ಕದ ಮಂಜೇಶ್ವರ - ಉಕ್ಕುಡ ರಸ್ತೆಯ ಪಳ್ಳದಪದವಿನಲ್ಲಿ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಜನವರಿ 17 ರಿಂದ ಮಾರ್ಚ್ 16 ರವರೆಗೆ ಭಾಗಶಃ ಸಂಚಾರ ನಿಯಂತ್ರಣವನ್ನು ಏರ್ಪಡಿಲಾಗುವುದು. ಈ ಮಾರ್ಗದಲ್ಲಿ 30 ಟನ್‍ಗಿಂತ ಹೆಚ್ಚು ಭಾರ ಹೊತ್ತು ಬರುವ ದೊಡ್ಡ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಸ್ತೆ ಅಗಲ ಕಿರಿದಾಗಿರುವುದರಿಂದಲೂ ಬದಲಿ ರಸ್ತೆಯ ವ್ಯವಸ್ಥೆ ಇಲ್ಲದ ಕಾರಣ ಬಸ್ ಹಾಗೂ ಇತರ ಸಣ್ಣ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು ಎಂದು ಸಹಾಯಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರ್ ರಾಜ್ಯ ಸಂಪರ್ಕದ ಮಂಜೇಶ್ವರ - ಉಕ್ಕುಡ ರಸ್ತೆಯಲ್ಲಿ ಭಾಗಶಃ ಸಂಚಾರ ನಿಯಂತ್ರಣ
0
ಜನವರಿ 12, 2023
Tags





