HEALTH TIPS

ಎನ್‍ಡಿಟಿವಿಗೆ ಖ್ಯಾತ ಪತ್ರಕರ್ತೆ ನಿಧಿ ರಾಝ್‍ದಾನ್ ರಾಜೀನಾಮೆ

              ವದೆಹಲಿ : ಖ್ಯಾತ ಪತ್ರಕರ್ತೆ ಹಾಗೂ ಸುದ್ದಿ ನಿರೂಪಕಿ ನಿಧಿ ರಾಝ್‍ದಾನ್ (Nidhi Razdan) ಅವರು NDTV ತೊರೆದಿದ್ದಾರೆ ಎಂದು ಮಾಧ್ಯಮಗೊಂದು ವರದಿ ಮಾಡಿದೆ. ಅದಾನಿ ಸಮೂಹವು ಎನ್‌ಡಿಟಿವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಈ ಸುದ್ದಿ ವಾಹಿನಿಯಲ್ಲಿ ರಾಜೀನಾಮೆಗಳ ಸರಣಿಗೆ ಇನ್ನೊಂದು ಸೇರ್ಪಡೆಯಾದಂತಾಗಿದೆ.

                      ನಿಧಿ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಎನ್‌ಡಿಟಿವಿ ಜೊತೆಗಿದ್ದರು.

                   2021 ರಲ್ಲಿ ಸ್ವಲ್ಪ ಕಾಲ ಸುದ್ದಿ ವಾಹಿನಿಯನ್ನು ನಿಧಿ ತೊರೆದಿದ್ದರೂ ನಂತರ ಫೆಬ್ರವರಿ 2022 ರಲ್ಲಿ ಮರುಸೇರ್ಪಡೆಗೊಂಡು ʻನೋ ಸ್ಪಿನ್‌ʼ ಕಾರ್ಯಕ್ರಮವನ್ನು ನಡೆಸುತ್ತಿದ್ದರು.

                        ಇದಕ್ಕೂ ಮೊದಲು ಎನ್‌ಡಿಟಿವಿಯ ಇನ್ನೊಬ್ಬ ಖ್ಯಾತ ಪತ್ರಕರ್ತರಾದ ಶ್ರೀನಿವಾಸನ್‌ ಜೈನ್‌ ಅವರು ಜನವರಿ 28 ರಂದು ಎನ್‌ಡಿಟಿವಿಗೆ ರಾಜೀನಾಮೆ ನೀಡಿದ್ದರು. ಶ್ರೀನಿವಾಸನ್‌ ಅವರು 1995 ರಿಂದ ಎನ್‌ಡಿಟಿವಿ ಜೊತೆಗಿದ್ದರು.

                   ಈಗಾಗಲೇ ಎನ್‌ಡಿಟಿವಿಯ ರವೀಶ್‌ ಕುಮಾರ್‌ ಹಾಗೂ ಎನ್‌ಡಿಟಿವಿಯ ಗ್ರೂಪ್‌ ಪ್ರೆಸಿಡೆಂಟ್‌ ಸುಪರ್ಣಾ ಸಿಂಗ್‌ ಕೂಡ ರಾಜೀನಾಮೆ ನೀಡಿದ್ದಾರೆ.

                ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್‌ ರಾಯ್‌ ಮತ್ತು ರಾಧೀಕಾ ರಾಯ್‌ ಡಿಸೆಂಬರ್‌ 2022 ರಲ್ಲಿಯೇ ಕಂಪೆನಿಯ ಮಂಡಳಿಯಿಂದ ನಿರ್ಗಮಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries