ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವಯಾಪ್ತಿಯ ಕುಂಡಂಗುಳಿ ನೀರ್ಕಯ ಎಂಬಲ್ಲಿ ತಾಯಿ ಮತ್ತು ಪುತ್ರಿಯ ಮ್ರತದೇಹ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಮೊದಲು ಶ್ರೀನಂದಾಳ ಕತ್ತು ದಾರದಿಂದ ಬಿಗಿದು ಕೊಲೆಗೈದ ನಂತರ ತಾನು ನೇಣಿಗೆ ಶರಣಾಗಿರುವುದಾಗಿ ಸಂಶಯಿಸಲಾಗಿದೆ. ಕುಂಡಂಗುಳಿ ನೀರ್ಕಯ ನಿವಾಸಿ, ಬಸ್ ಚಾಲಕ ಚಂದ್ರನ್ ಎಂಬವರ ಪತ್ನಿ ನಾರಾಯಣಿ(45)ಹಾಗೂ ಇವರ ಪುತ್ರಿ ಶ್ರೀನಂದ(12)ಮೃತದೇಹ ಭಾನುವಾರ ಪತ್ತೆಯಾಗಿತ್ತು.
ಮೃತದೇಹದ ತಪಾಸಣೆ ನಡೆಸುವ ಮಧ್ಯೆ ಶ್ರೀನಂದಾಳ ಕತ್ತಿನಲ್ಲಿ ದಾರದಿಂದ ಬಿಗಿದ ಗುರುತು ಪತ್ತೆಯಾಗಿದೆ. ಶ್ರೀನಂದಾಳನ್ನು ಕತ್ತುಬಿಗಿದು, ಮುಖಕ್ಕೆ ತಲೆದಿಂಬು ಅಥವಾ ಇತರ ವಸ್ತು ಅದುಮಿಹಿಡಿದು ಉಸಿರುಗಟ್ಟಿಸಿ ಕೊಲೆಗೈದಿರುವುದನ್ನು ಖಚಿತಪಡಿಸಲಾಗಿದೆ. ಮೃತದೇಹಗಳನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.
ನಾರಾಯಣಿ ಅವರು ಅಡುಗೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಶ್ರೀನಂದ ಅವರ ಮೃತದೇಹ ಇನ್ನೊಂದು ಕೊಠಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಾರಾಯಣಿ ಅವರು ಬೀಡಿ ಕಾರ್ಮಿಕೆಯಾಗಿದ್ದು, ಶ್ರೀನಂದಾ ಕುಮಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ನಾರಾಯಣಿ ಅವರ ಪತಿ ಚಂದ್ರನ್ ಟೂರಿಸ್ಟ್ ಬಸ್ ಚಾಲಕರಾಗಿದ್ದಾರೆ.
ಮೃತದೇಹ ಪತ್ತೆ: ಪುತ್ರಿಯ ಕೊಲೆಗೈದು ತಾಯಿ ಆತ್ಮಹತ್ಯೆ?
0
ಜನವರಿ 24, 2023
Tags

